ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

0
ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ   ಲಕ್ಷ್ಮಣ ಸವದಿ ಅವರ ನಾಯಕತ್ವವನ್ನು ಮೆಚ್ಚಿ ಅಥಣಿ ಮತಕ್ಷೇತ್ರದ ಶಿರಹಟ್ಟಿ ಗ್ರಾಮದ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ  ಸೇರ್ಪಡೆಯಾದರು.ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಡಿಸಿಎಮ್ ಲಕ್ಷ್ಮಣ ಸವದಿ ಅವರು ನುಡಿದಂತೆ ನಡೆಯುವ ಜನನಾಯಕರಾಗಿದ್ದು ಅಭಿವೃದ್ಧಿಯತ್ತ ಜನರನ್ನು ಕರೆದೊಯ್ಯುವ ನಿಜವಾದ ಜನಸೇವಕರಾಗಿದ್ದಾರೆ.
ಕೊರೊನಾ ದಂತಹ ಸಂಕಷ್ಟದ ದಿನಗಳಲ್ಲಿ ಜನರನ್ನು ಅವರು ನೋಡಿದ ರೀತಿ, ಮತ್ತು ಜನರಿಗಾಗಿ ಅವರು ಮಾಡಿದ ಸೇವೆ ಹಾಗೂ ಮುಂದಿನ  ಯೋಜನೆಗಳನ್ನು ಅರಿತು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇವೆ ಒಬ್ಬ ಉತ್ತಮ ನಾಯಕ ನಮಗೆ ಬೇಕು ಪಕ್ಷ ಮತ್ತು ಸಿದ್ದಾಂತಗಳ ನ್ನು ಪಾಲಿಸುವದರ ಜೊತೆಗೆ ಡಿಸಿಎಮ್ ಸವದಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಇಂದು ಸೇರ್ಪಡೆ ಆಗಿದ್ದೇವೆ ಎಂದು ರಾವಸಾಬ್ ಸುಗ್ಗಣ್ಣವರ ಹೇಳಿದರು.
ಈ ವೇಳೆ ಶ್ರೀ ಮಲ್ಲಪ್ಪ ತೀರ್ಥ, ಸುಕುಮಾರ ತೀರ್ಥ, ನಿಂಗನ್ನ ಹಳಿಂಗಳಿ, ಅನ್ನಪ್ಪ ದಾನಗೌಡರ, ಗೋಪಾಲ್ ಸುಗ್ಗನ್ನವರ, ಲಕ್ಷ್ಮಣ ತೀರ್ಥ ಸೇರಿದಂತೆ ಮತ್ತಿತರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');