ಪತ್ರಿ ಬಸವ ನಗರದ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಡಾ.ನಿರ್ಮಲಾ ಮಹಾಂತಶೆಟ್ಟಿ ಅವರನ್ನು ಸತ್ಕರಿಸಲಾಯಿತು.

0

ಪತ್ರಿ ಬಸವ ನಗರದ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಡಾ.ನಿರ್ಮಲಾ ಮಹಾಂತಶೆಟ್ಟಿ ಅವರನ್ನು ಸತ್ಕರಿಸಲಾಯಿತು.
ಬೈಲಹೊಂಗಲ- ವೈದ್ಯೋ ನಾರಾಯಣೋ ಹರಿ ಎನ್ನುವ ಹಾಗೆ ಕೋರೋಣ ಸಂವತ್ಸರದ ಈ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಮನುಕುಲವನ್ನು ರಕ್ಷಿಸುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರ ಸೇವೆ ಅಗಾಧನೀಯವಾಗಿದೆ ಎಂದು ಪಟ್ಟಣದ ಪತ್ರಿ ಬಸವ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ್ಯೆ ಶರಣೆ ಪ್ರೇಮಕ್ಕ ಅಂಗಡಿ ಹೇಳಿದರು.

ಅವರು ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಹಾಗೂ ಆರೋಗ್ಯ ಸಹಾಯಕಿಯರ ಪರವಾಗಿ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲಾ ಮಹಾಂತ ಶೆಟ್ಟಿ ಅವರನ್ನು ಸತ್ಕರಿಸಿ ಮಾತನಾಡಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾ ನಿರ್ಮಲಾ ಮಹಾಂತ ಶೆಟ್ಟಿ ಅವರು ನಮ್ಮ ಸೇವೆ ಗುರುತಿಸಿ ಸನ್ಮಾನಿಸಿದ್ದು ಜನರ ಸೇವೆಗೆ ಮತ್ತಷ್ಟು ಸ್ಫೂರ್ತಿ ತಂದಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ ಪ್ರವೀಣ್ ಕುಲಕರ್ಣಿ, ಡಾ ಎಸ್.ಎಂ ಸೌಸುದ್ದಿ, ಡಾ. ಶಹನವಾಜ, ಡಾ. ರವಿ, ಜಕನೂರ, ಡಾ. ಮಂಜುನಾಥ್ ಮರಿಗೇರಿ, ಹಾಗೂ ಆರೋಗ್ಯ ಸೇವಕಿಯರಾದ ಎಂ. ವಿ. ಮೂಲಿಮನಿ. ದಾಕ್ಷಾಯಣಿ ಕಾಗಲಗೊಂಬ, ರಾಜೇಶ್ವರಿ ನಾಯಕ, ಡಿ.ಎಸ್. ದೇಸಾಯಿ, ಎಚ್. ಬಿ. ನಿಕ್ಕಂ ಉಪಸ್ಥಿತರಿದ್ದರು.

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');