ಪರಿಸರ ಸಂಪತ್ತನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಉಳಿಗಾಲ:ಪರಿಸರ ತಜ್ಞ ಪೆÇ್ರ.ಜಿ.ಕೆ ಖಡಬಡಿ

0

ಬೆಳಗಾವಿ,ಜು..05  :ಪರಿಸರ ಸಾಮಾಜಿಕ-ಆರ್ಥಿಕ ಜಾಗತಿಕವಾಗಿ ಎಲ್ಲವುಗಳ ಬೆಳವಣಿಗೆಗೆ ಪರಿಸರವೇ ಮೂಲವಾಗಿದೆ. ನೀರು, ಭೂಮಿ, ಅರಣ್ಯ, ವಾಯು ಇಂತಹ ಅಂಗಗಳನ್ನು ಹೊಂದಿರುವ ಪರಿಸರ ಶೇ.90ರಷ್ಟು ಮಲೀನವಾಗುವುದು ಮಾನವನಿಂದಲೇ ಎಂದು ಪರಿಸರ ಮಿತ್ರ ಸಂಘಟನೆಯ ಅಧ್ಯಕ್ಷರು ಹಾಗೂ ನಿವೃತ್ತ ಅಧಿಕಾರಿಗಳಾದ ಪೆÇ್ರ.ಜಿ.ಕೆ. ಖಡಬಡಿ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳ ಸಹಯೋಗದೊಂದಿಗೆ ರವಿವಾರ (ಜು.05) “ಪರಿಸರ ಮಾಲಿನ್ಯ ನಿರ್ವಹಣೆ” ಕುರಿತು ವೆಬಿನಾರ್ ಮೂಲಕ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಳೆ ನೀರು ಕೊಯ್ಲು , ಇಂಗುಗುಂಡಿ ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಿಸಬಹುದು. ಕೃಷಿ ಕಾರ್ಖಾನೆ, ಗೃಹಬಳಕೆ ಎಲ್ಲದರಲ್ಲೂ ಸಹ ನಿರ್ವಹಣೆ ಮುಖ್ಯ. ವಾಯು ಸಹ ಇಂದಿನ ವಿಷಕಾರಿಕ ಅನಿಲಗಳು ಹೆಚ್ಚಾಗುವ ಕಾರಣ ಮಲಿನವಾಗುತ್ತಿದೆ. ಶೇ.75 ರಷ್ಟು ವಾಹನಗಳಿಂದ ವಾಯುಮಾಲಿನ್ಯ ಆಗುತ್ತಿದೆ.
ಅದಕ್ಕೆ ಪರ್ಯಾಯವಾಗಿ ನಾವು ಜೈವಿಕ ಇಂಧನಗಳನ್ನು, ಸೌರಶಕ್ತಿಯನ್ನು ಹೆಚ್ಚಾಗಿ ಬಳಸಬೇಕಿದೆ. ವಿಷಾನಿಲಗಳು ವಿಪರೀತ ಬಿಡುಗಡೆ ಆಗುವುದರಿಂದ ಓಝೇನ್ ಪದರು ತೆಳುವಾಗಿ ಮುಂದೆ ಬರಬಹುದಾದ ಗಂಡಾಂತರವನ್ನು ತಪ್ಪಿಸಲು ನಾವು ವಾಯುಮಾಲಿನ್ಯವನ್ನು ತಡೆಯಬೇಕಾಗಿದೆ. ಅದೇ ರೀತಿ ಭೂಮಿಯು ಸಹ ವಿಪರೀತವಾದ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದನ್ನು ತಡೆಯಲು ಸಾವಯವ ಗೊಬ್ಬರವನ್ನು ಬಳಸಬೇಕು ಎಂದು ಪೆÇ್ರ.ಜಿ.ಕೆ. ಖಡಬಡಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಚ.ಕಿತ್ತೂರು ಕ.ಸಾ. ಅಧ್ಯಕ್ಷರಾದ ಡಾ.ಶೇಖರ ಹಲಸಗಿ ಅವರು ಮಾತನಾಡಿ, ’ನಮ್ಮನ್ನು ಮರೆತರೆ ಸುಖವಿಲ್ಲ, ಪರಿಸರವನ್ನು ಮರೆತರೆ ಉಳಿಗಾಲವಿಲ್ಲ’ ಎಂಬುದನ್ನು ಅರಿತು ಪರಿಸರ ಪ್ರಜ್ಞೆ ನಮ್ಮೆಲ್ಲರಲ್ಲೂ ಬರಬೇಕು. ಎಲ್ಲ ಸರಕಾರಿ ಶಾಲೆಗಳಲ್ಲಿ ಹೆಚ್ಚು ಗಿಡಮರಗಳನ್ನು ಬೆಳೆದು ಹಸಿರು ಕ್ರಾಂತಿಯ ಕಲ್ಪನೆ ಮಕ್ಕಳಲ್ಲಿ ಮೂಡಿಸಬೇಕಾಗಿದೆ ಎಂದರು.

ಆಶಯ ನುಡಿಗಳನ್ನಾಡಿದ ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು ಪರಿಸರ ದಿನ ಕೇವಲ ದಿನಕ್ಕೆ ಸೀಮಿತವಾಗಿರದೆ ನಿತ್ಯವೂ ಆಗಿರಲಿ. ಸಾಧ್ಯವಾದಷ್ಟು ಮಾನಸಿಕವಾಗಿ ಪ್ರತಿಯೊಬ್ಬರೂ ಪರಿಸರವನ್ನು ಸ್ವಚ್ಛವಾಗಿರುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಸಾಧ್ಯವಿದ್ದಷ್ಟು ಪ್ಲಾಸ್ಟಿಕನ್ನು ದೂರಮಾಡುವ ಇಲ್ಲವೇ ಮರುಬಳಕೆ ಆಗುವ ರೀತಿಯಲ್ಲಿ ಬಳಸಿದರೆ ಮಾತ್ರ ಸೃಷ್ಟಿಗೆ ಇದರಿಂದ ಉಳಿಗಾಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಗಾರ್ಗಿ, ಹೇಮಾವತಿ ಸೊನೊಳ್ಳಿ,ಎಂ.ಎಸ್.ಹೊಂಗಲ, ಶಿವಾನಂದ ತಲ್ಲೂರ, ರಜನಿ ಜಿರಗ್ಯಾಳ, ಶಬಾನ ಅಣ್ಣಿಗೇರಿ, ಶೈಲಜಾ ಮಸೂತಿ, ವೈ.ಎಂ.ಯಾಕೊಳ್ಳಿ, ಪಾಂಡುರಂಗ ಯಲಿಗಾರ, ಗುರುದೇವಿ ಹುಲೆಪ್ಪನವರಮಠ, ಅನ್ನಪೂರ್ಣಾ ಕನೋಜ, ಕಮಲಾಕ್ಷಿ ಭಾವಿಹಾಳ, ಶ್ರೀಶೈಲ ಗೋಕಾಕ, ಜಿ.ಪಿ.ಪನ್ನೂರಿ, ಪತ್ರಕರ್ತ ಮುರಗೇಶ ಶಿವಪೂಜೆ, ಬಸವರಾಜು, ಸುರೇಶ ಮರಿಲಿಂಗಣ್ಣವರ,

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾಲರಾಜ್ ಭಜಂತ್ರಿ, ಕ.ಸಾ.ಪ. ವಿವಿಧ ತಾಲೂಕುಗಳ ಅಧ್ಯಕ್ಷರಾದ ವಿಜಯ ಬಡಿಗೇರ,ವಿದ್ಯಾವತಿ ಜನವಾಡೆ, ಶ್ರೀಪಾದ ಕುಂಬಾರ, ಮಹಾಂತೇಶ ಉಕ್ಕಲಿ, ಸಿದ್ರಾಮ ದ್ಯಾಗಾನಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂ.ವಾಯ್ .ಮೆಣಸಿನಕಾಯಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಪಾಂಡುರಂಗ ಜಟಗನ್ನವರ ಸಂಯೋಜಿಸಿ, ನಿರ್ವಹಿಸಿದರು. ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಸಿ.ಬಿ.ದೊಡಗೌಡರ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿದರು. ಎಂ.ವಾಯ್ ಮೆಣಸಿನಕಾಯಿ ಅವರು ವಂದನಾರ್ಪನೆ ಸಲ್ಲಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');