ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪರಿಹಾರ ಧನ ಜಮೆ

0

ಬೆಳಗಾವಿ,ಜು..05 : ಕೋವಿಡ್-19 2 ನೆ ಅಲೆ ಹಿನ್ನಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ. 3000 ಪರಿಹಾರಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕದ ಉಪ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ, ಬೆಳಗಾವಿ ಪ್ರಾದೇಶಿಕ, ಬಾಗಲಕೋಟ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಕಾರವಾರ ಜಿಲ್ಲೆಗಳಲ್ಲಿಯ 4.19 ಲಕ್ಷ ಜನ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಒಟ್ಟು ರೂ.125.80 ಕೋಟಿ ಪರಿಹಾರ ಧನ ಮೊತ್ತವು ನೇರವಾಗಿ ಫಲಾನುಭವಿಗಳ ಖಾತೆಗೆ ರೂ.3000 ಜಮೆಯಾಗಿರುತ್ತದೆ

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ 86,973 ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಹಾರ ಧನ ಮೊತ್ತ ಜಮೆಯಾಗಿದ್ದು, 14,498 ಫಲಾನುಭವಿಗಳ ಖಾತೆಗೆ ತಾಂತ್ರಿಕ ಕಾರಣಗಳಿಂದ ಪರಿಹಾರ ಧನ ಜಮೆಯಾಗಿರುವುದಿಲ್ಲ. ಪರಿಹಾರ ಧನ ಜಮೆಯಾದ ಮತ್ತು ಜಮೆಯಾಗದೇ ಇರುವ ಫಲಾನುಭವಿಗಳ ಪಟ್ಟಿಯು ಮಂಡಳಿಯ ಞಚಿಡಿbತಿತಿb.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ.

ಪರಿಹಾರ ಧನ ಜಮೆಯಾಗದೇ ಇರುವುದಕ್ಕೆ ಸಕಾರಣಗಳನ್ನು ಸಹ ವೆಬ್‍ಸೈಟ್‍ನಲ್ಲಿ ನಮೂದಿಸಲಾಗಿದೆ. ಅರ್ಹ ಫಲಾನುಭವಿಗಳು ಚಾಲ್ತಿಯಲ್ಲಿರುವ ಹಾಗೂ ಆಧಾರ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪೂರಕ ದಾಖಲೆಗಳೊಂದಿಗೆ ಆಯಾ ತಾಲೂಕಿನ ಕಾರ್ಮಿಕ ನೀರಿಕ್ಷಕರ ಕಛೇರಿ ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಒಂದು ವಾರದೊಳಗೆ ಸಲ್ಲಿಸಬೇಕು.

ಪರಿಹಾರ ಧನ ಜಮೆ ಮಾಡಲು ಮಂಡಳಿಗೆ ಸಲ್ಲಿಸಲಾಗುವುದು ಎಂದು ಬೆಳಗಾವಿ ಪ್ರಾದೇಶಿಕದ ಉಪ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು ತಿಳಿಸಿದ್ದಾರೆ.

 

ಮೊದಲನೇ ತ್ರೈಮಾಸಿಕ ಕೆ.ಡಿ.ಪಿ ಸಭೆ ಮುಂದೂಡಿಕೆ

ಬೆಳಗಾವಿ,ಜು..05: 2021-22 ನೇ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜು.7 ರಂದು ನಡೆಯಬೇಕಾಗಿದ್ದ ಕೆ.ಡಿ.ಪಿ ಸಭೆಯನ್ನು ಜು.8 ಕ್ಕೆ ಮುಂದೂಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‍ನಲ್ಲಿ ಗುರುವಾರ (ಜು.8)ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ ಸಭೆ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಜುಲೈ ಮಾಹೆಯ ಪಡಿತರಧಾನ್ಯ ಬಿಡುಗಡೆ

ಬೆಳಗಾವಿ,ಜು..05  : ಕೋವಿಡ್ 19 ಎರಡನೇ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಸಾರ ಸಾರ್ವಜನಿಕ ವಿತರಣಾ ಪದ್ಧತಿಯಡಿ 2021ರ ಜುಲೈ ಮಾಹೆಯ ಧಾನ್ಯಗಳನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂತ್ಯೊದಯ ಪಡಿತರ ಚೀಟಿ  (NFSA) ದಾರರಿಗೆ ಅಕ್ಕಿ 35 ಕೆಜಿ, (PMGKAY) ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.
ಬಿಪಿಎಲ್(ಆದ್ಯತಾ) ಪಡಿತರ ಚೀಟಿ(ಓಈSಂ)ದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿ, (PMGKAY) ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, (NFSA) ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋದಿ.

ಎಪಿಎಲ್ ಪಡಿತರ ಚೀಟಿ ಆದ್ಯೇತರ ಒಪ್ಪಿಗೆ ನೀಡಿದ ಪಡಿತರ ಚೀಟಿಗೆ ಏಕ ಸದಸ್ಯನಿಗೆ 5 ಕೆಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆಜಿ ಅಕ್ಕಿ ಪ್ರತಿ ಕೆಜಿ ಗೆ 15 ರೂ. ಯಂತೆ ನೀಡಲಾಗುವುದು.

ಪ್ರತಿ ಮಂಗಳವಾರ ರಜೆಯ ದಿನವನ್ನು ಹಿಂದೆ ಪಡೆದು, ರಾಷ್ಟ್ರೀಯ ರಜೆಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ಮಾಡುವಂತೆ ನ್ಯಾಯಬೆಲೆ ಅಂಗಡಿಕಾರರಿಗೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿಂದ ತೊಂದರೆ ಉಂಟಾದಲ್ಲಿ, 1967 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು.

ಪ್ರತಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ವಿತರಣೆ ಮಾಡಬಾರದು ಹಾಗೂ ಯಾವುದೇ ಕಾರಣಕ್ಕೂ ಪಡಿತರ ಚೀಟಿದಾರರಿಂದ ಇಂಟರ್ನೆಟ್ ಚಾರ್ಜರ್ಸ್ ವಸೂಲಿ ಮಾಡಿದ ದೂರು ಬಂದಲ್ಲಿ ಆಯಾ ತಾಲೂಕಿನ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೆ ನೇರ ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಅಂತರರಾಜ್ಯ/ಅಂತರ ಜಿಲ್ಲೆ ಪೆÇೀರ್ಟೆಬಿಲಿಟಿ ಜಾರಿ ಇರುವುದರಿಂದ ಯಾವುದೇ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಸ್ತುಗಳನ್ನು ಪಡೆಯುವುದು ಕಡ್ಡಾಯವಾಗಿದೆ

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');