ಖದೀಮರಿಂದ ಮಹಿಳೆಗೆ ಬೆದರಿಕೆ: ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳರು

0

ಹುಬ್ಬಳ್ಳಿ: ನಗರದ ಹೊರವಲಯದ ಶ್ರೀರಾಮ ಫೈನಾನ್ಸ್ ಬಳಿಯಲ್ಲಿ ದರೋಡೆಕೋರರಿಬ್ಬರು ಚಾಕು ತೋರಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ರಾತ್ರಿ ನಡೆದಿದೆ.

ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುತ್ತಿದ್ದ ಅಬ್ದುಲ್ ಖಾದರ್ ನದಾಪ ಎಂಬುವರು,  ತಮ್ಮ ಕುಟುಂಬ ಸಮೇತ ಹಾವೇರಿಗೆ ಹೋಗುವಾಗ ಶ್ರೀರಾಮ ಫೈನಾನ್ಸ್ ಬಳಿಯಲ್ಲಿ ತಮ್ಮ ಕಾರು ನಿಲ್ಲಿಸಿ ಹಿಂದಿನ ಚಕ್ರವನ್ನು ನೋಡುವಾಗ, ಡಿಯೋ ವಾಹನದಲ್ಲಿ ಬಂದ ಇಬ್ಬರು ಯುವಕರು ಚಾಕು ತೋರಿಸಿ ಕಾರಿನಲ್ಲಿದ್ದ ಮಹಿಳೆಯ ಮಾಂಗಲ್ಯವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕೂಡಲೇ ಅಬ್ದುಲ್ ಖಾದರ್ ನದಾಪ ಅವರು ಬೆಂಡಿಗೇರಿ ಪೊಲೀಸ್ ಠಾಣೆಗೆ ವಿಷವನ್ನು ತಿಳಿಸಿದ್ದಾರೆ. ಆದ್ರೆ ಘಟನೆ ನಡೆದಿರುವುದು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಾರಣ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');