ನಿಧನರಾದ ಮಾಜಿ ಜಿಪಂ.ಉಪಾಧ್ಯಕ್ಷೆ ತೇಜಸ್ವಿನಿ ನಾಯಕವಾಡಿ ಮನೆಗೆ ರಾಹುಲ್ , ಪ್ರಿಯಾಂಕಾ ಜಾರಕಿಹೊಳಿ ಭೇಟಿ

0

ಮೂಡಲಗಿ : ತಾಲ್ಲೂಕಿನ ಕಂಕನವಾಡಿ ಗ್ರಾಮದಲ್ಲಿ ಇತ್ತಿಚೇಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಶ್ವಿನಿ ನಾಯಕವಾಡಿ ಅವರ ಮನೆಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಹುಲ್ ಜಾರಕಿಹೊಳಿ ಮಾತನಾಡಿ, ಇತ್ತಿಚೇಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ತೇಜಸ್ವಿನಿ ನಾಯಕವಾಡಿ ಅವರ ಕಾಲಾವಧಿಯಲ್ಲಿ  ಅನೇಕ ಕೆಲಸಗಳನ್ನು  ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಗೋಕಾಕದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ , ಚಿತ್ರದುರ್ಗದ ಬಗೀರಥ ಪೀಠದ ಜಗದ್ಗುರು ಪುರುಷೋತ್ತಮಪುರಿ ಸ್ವಾಮೀಜಿ,  ನಂದಿಕುರಳಿಯ ವೀರಭದ್ರ ಸ್ವಾಮೀಜಿ, ಸುಣದೋಳಿ ಮಠದ ಅಭಿನವ ಜಡಸಿದ್ಧೇಶ್ವರ ಸ್ವಾಮೀಜಿ, ಚಿಕ್ಕಲಗಿಮಠದ ಶಿವಾನಂದ ಸ್ವಾಮೀಜಿ, ಬನಹಟ್ಟಿಯ ಮಹಾಂತ ಸ್ವಾಮೀಜಿ, ಮಾತೋಶ್ರೀ ಮುಗಳಕೋಡ, ಕಾಂಗ್ರೆಸ್ ಮುಖಂಡಾದ ಎಸ್.ಕೆ.ಬುಟಾಳೆ ,    ಕೃಷ್ಣಾ ಮಾಳಿ, ಶಬ್ಬೀರ ಡಾಂಗೆ ಸೇರಿದಂತೆ ಇತರರು ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');