ವಿಧಾನಸಭಾ ಸ್ಪೀಕರ ನಿಂದನೆ : ಬಿಜೆಪಿ 12 ಶಾಸಕರ ಅಮಾನತು

0

ಮುಂಬೈ : ಮಹಾರಾಷ್ಟ್ರ ವಿಧಾನಸಭೆಯ ಮಾನ್ಸೂನ್ ಅಧಿವೇಶನ ಇಂದು ಗಲಾಟೆ-ಗದ್ದಲದೊಂದಿಗೆ ಆರಂಭವಾಗಿದ್ದು, ಸ್ಪೀಕರ್ ನಿಂದನೆ ಹಾಗೂ ಹಲ್ಲೆಗೆ ಮುಂದಾದ ಕಾರಣ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದ ತನಕ ಸದನದಿಂದ ಅಮಾನತುಗೊಳಿಸಲಾಗಿದೆ.

ಬಿಜೆಪಿ ಶಾಸಕರು ನಿಂದನೀಯ ಭಾಷೆ ಬಳಸಿದ್ದಾರೆ ಹಾಗೂ ಕೋಲಾಹಲ ಸೃಷ್ಟಿಸಿದ್ದಾರೆ ಎಂದು ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರ ಆರೋಪಿಸಿದ ನಂತರ  ರಾಜ್ಯ ಸಂಸದೀಯ ವ್ಯವಹಾರ ಸಚಿವ ಅನಿಲ್ ಪರಬ್ ಬಿಜೆಪಿಯ ಶಾಸಕರನ್ನು ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು. ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

ಕ್ಯಾಬಿನ್‌ನಲ್ಲಿ ನಡೆದ ಗದ್ದಲದ ಸಮಯದಲ್ಲಿ ಹಾಜರಿದ್ದ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, “ಇವು ಸುಳ್ಳು ಆರೋಪಗಳು.  ಬಿಜೆಪಿಯಿಂದ ಯಾರೂ ನಿಂದನೆ ಮಾಡಿಲ್ಲ, ಶಿವಸೇನೆಯ ಶಾಸಕರು ಅವಾಚ್ಯ ಪದ ಬಳಸಿದ್ದಾರೆ. ಅಮಾನತುಗೊಂಡಿರುವ ಬಿಜೆಪಿ ಶಾಸಕ ಆಶೀಷ್ ಶೆಲಾರ್ ಕ್ಷಮೆಯಾಚಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿದಿದೆ” ಎಂದು ಮಾಧ್ಯಮಕ್ಕೆ ತಿಳಿಸಿದರು.

ಪ್ರತಿಪಕ್ಷದ ನಾಯಕರು ನನ್ನ ಕ್ಯಾಬಿನ್‌ಗೆ ಬಂದು ದೇವೇಂದ್ರ ಫಡ್ನವೀಸ್ ಮತ್ತು ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಅವರ ಎದುರೇ  ಅಸಂಸದೀಯ ಭಾಷೆ ಬಳಸಿ ನನ್ನನ್ನು ನಿಂದಿಸಿದ್ದಾರೆ. ಕೆಲವು ನಾಯಕರು ನನ್ನನ್ನು ಎಳೆದಾಡಿದ್ದಾರೆ” ಎಂದು ಜಾಧವ್ ಮಾಧ್ಯಮಗಳಿಗೆ ತಿಳಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');