ಅಂಬೇಡ್ಕರ್, ಆಶ್ರಯ ಯೋಜನೆ: ಫಲಾನುಭವಿಗಳು ವಾಸಿಸದ ಮನೆಗಳ ಹಕ್ಕು ಪತ್ರ ರದ್ದು

0

ಬೆಳಗಾವಿ: ಮಹಾನಗರ ವ್ಯಾಪ್ತಿಯೊಳಗೆ ಬರುವ ಸಾರಥಿನಗರದಲ್ಲಿ ಆಶ್ರಯ ಯೋಜನೆ ಹಾಗೂ ವಂಟಮೂರಿ ಕಾಲನಿಯಲ್ಲಿ ಅಂಬೇಡ್ಕರ್ ಯೋಜನೆ ಮತ್ತು ಆಶ್ರಯ ಯೋಜನೆಯಡಿ   ನಿರ್ಮಿಸಲಾಗಿರುವ ಮನೆಗಳಲ್ಲಿ ಮಂಜೂರಾದ ಫಲಾನುಭವಿಗಳು ಮನೆಗಳಲ್ಲಿ ವಾಸಿಸದೆ ಇರುವುದರಿಂದ ಅವರ ಹಕ್ಕುಪತ್ರಗಳನ್ನು ರದ್ದು ಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ.

ಸಾರಥಿನಗರದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಿರುವ ಮನೆಗಳ ಪೈಕಿ 15 ಮನೆಗಳಲ್ಲಿ ಹಾಗೂ ವಂಟಮೂರಿ ಕಾಲನಿಯಲ್ಲಿ ನಿರ್ಮಿಸಿರುವ ಮನೆಗಳ ಪೈಕಿ ಅಂಬೇಡ್ಕರ್ ಯೋಜನೆಯ 04 ಮನೆಗಳಲ್ಲಿ ಮತ್ತು ಆಶ್ರಯ ಯೋಜನೆಯಡಿ 03 ಮನೆಗಳಲ್ಲಿ ಮಂಜೂರಾದ ಫಲಾನುಭವಿಗಳು ಮನೆಗಳಲ್ಲಿ ವಾಸಿಸುತ್ತಿಲ್ಲ.

ಆದ್ದರಿಂದ ಸರ್ಕಾರದ ನಿಯಮಾನುಸಾರ 2016 ರ ಸಪ್ಟೆಂಬರ್ 29 ,2017 ರ ಜುಲೈ 31 ಹಾಗೂ ಅಗಸ್ಟ್ 10 ರಂದು ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಂಜೂರಾದ ಫಲಾನುಭವಿಗಳು ಮನೆಗಳಲ್ಲಿ ವಾಸಿಸದೆ ಇರುವುದರಿಂದ ಸದರಿ ಫಲಾನುಭವಿಗಳ ಮಂಜೂರಾತಿ ರದ್ದು ಪಡಿಸಿ ಬೇರೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿದನ್ವಯ ಸಾರಥಿ ನಗರದ 15 ವಂಟಮೂರಿ ಕಾಲನಿಯ ಅಂಬೇಡ್ಕರ ಯೋಜನೆಯ 04 ಆಶ್ರಯ ಯೋಜನೆಯ 03 ಫಲಾನುಭವಿಗಳ ಹಕ್ಕುಪತ್ರಗಳನ್ನು ರದ್ದು ಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');