ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ; 160 ಗ್ರಾಂ ಚಿನ್ನದ ಆಭರಣಗಳನ್ನು ದೋಚಿದ ಖದೀಮರು

0

ಚಿಕ್ಕೋಡಿ: ಪಟ್ಟಣದ ಇಂದಿರಾನಗರದಲ್ಲಿನ ಮನೆಗಳಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, 160 ಗ್ರಾಂ ಚಿನ್ನದ ಆಭರಣಗಳನ್ನು ಖದೀಮರು ದೋಚಿದ್ದಾರೆ.

ಸೋಮವಾರ ತಡ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಮೊದಲು ಪತ್ತೆ ಹಚ್ಚಿರುವ ಕಳ್ಳರು 5 ಮನೆಗಳ ಬೀಗ ಮುರಿದು ಒಂದು ಮನೆಯಲ್ಲಿನ 110 ಗ್ರಾಂ ಚಿನ್ನದ ಆಭರಣ, ಮತ್ತೊಂದು ಮನೆಯಲ್ಲಿನ 50 ಗ್ರಾಂ ಚಿನ್ನದ ಆಭರಣಗಳು ಸೇರಿದಂತೆ ಒಟ್ಟು 160 ಗ್ರಾಂ ಚಿನ್ನದ ಆಭರಣಗಳು ಹಾಗೂ ಮತ್ತೊಂದು ಮನೆಯಲ್ಲಿನ 7,500 ರೂ. ನಗದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಇನ್ನೂ ಎರಡು ಮನೆಗಳಲ್ಲಿ ಕಳ್ಳತನಕ್ಕಾಗಿ ನುಗ್ಗಿದ್ದ ಕಳ್ಳರಿಗೆ ಆ ಮನೆಗಳಲ್ಲಿ ಯಾವುದೇ ಹಣ ಮತ್ತು ಚಿನ್ನ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಡಿವೈಎಸ್ಪಿ ಮನೋಜಕುಮಾರ ನಾಯಿಕ, ಸಿಪಿಐ ಆರ್.ಆರ್. ಪಾಟೀಲ ಮತ್ತು ಪಿಎಸ್‍ಐ ಅಶೋಕ ಕೊಳ್ಳೂರ ಸ್ಥಳಕ್ಕೆ ಬೇಟಿ ನೀಡಿದರು. ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಚಿಕ್ಕೋಡಿ ಪೊಲೀಸರು ತಿಳಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');