ಜುಲೈ ತಿಂಗಳಲ್ಲಿ ಡೆಂಗೀ ವಿರೋಧಿ ಮಾಸಾಚರಣೆ: ಡಾ. ಪಲ್ಲೇದ್

0
🌐 Belgaum News :

ಬೆಳಗಾವಿ: “ಡೆಂಗೀ ವಿರೋಧಿ ಮಾಸಾಚರಣೆಯನ್ನು  ಜುಲೈ ತಿಂಗಳಲ್ಲಿ ಆಚರಿಸಲಾಗುವುದು” ಎಂದು ಜಿಲ್ಲಾ ರೋಗವಾಹಕ  ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಮ್.ಎಸ್.ಪಲ್ಲೇದ್ ತಿಳಿಸಿದ್ದಾರೆ.

ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 2021 ನೇ ಸಾಲಿನಲ್ಲಿ ನಡೆಸಲಾಗುತ್ತಿದೆ. ಡೆಂಗಿ ಜ್ವರ  ವೈರಸನಿಂದ ಉಂಟಾಗುವ ಕಾಯಿಲೆ ಇದಾಗಿದು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಜಾಗೃತ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮನೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಸ್ವಚ್ಛ ನೀರಿನಲ್ಲಿ ಬೆಳೆಯುವ ಇದು, ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ ಎಂದು ತಿಳಿಸಿದ್ದಾರೆ.

ಡೆಂಗೀಜ್ವರ ಹರಡದಂತೆ ತಡೆಯಲು ಮುಂಜಾಗೃತಾ ಕ್ರಮಗಳು:
ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರಕೂಲರ್, ಇತ್ಯಾದಿಗಳನ್ನು ತಪ್ಪದೆ ವಾರಕ್ಕೊಮ್ಮೆ ಖಾಲಿಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು.
ನೀರು ಕಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳಲ್ಲಿ ಸೊಳ್ಳೆಗಳು ನುಸುಳದಂತೆ ಸರಿಯಾಗಿ ಮುಚ್ಚಳದಿಂದ ಮುಚ್ಚುವುದು.
ಮನೆಯ ಸುತ್ತ ಮುತ್ತಲಿನ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ ಇಲ್ಲ ಸೂಕ್ತ ವಿಲೇವಾರಿ ಮಾಡುವುದು.
ನೀರಿನ ಅಭಾವ ಇರುವ ಸಂದರ್ಭಗಳಲ್ಲಿ ಶೇಖರಿಸಲ್ಪಟ್ಟ ನೀರನ್ನು ಸೋಸಿ ಮತ್ತೆ ಸ್ವಚ್ಛಗೊಳಿಸಿ ನೀರನ್ನು ಬಳಸಬಹುದು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು.
ಮನೆಯ ಕಿಟಕಿ, ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳುವುದು. ಸೊಳ್ಳೆಯ ಮರಿಗಳನ್ನು ಆಹಾರವಾಗಿ ಉಪಯೋಗಿಸುವ ಲಾರ್ವಾ ಹಾರಿ ಮೀನುಗಳಾದ ಗ್ಯಾಂಬೋಸಿಯ ಮತ್ತು ಗಪ್ಪಿ ಎಂಬ ಮೀನುಗಳನ್ನು ನಿಂತ ನೀರಿನ ತಾಣಗಳಲ್ಲಿ ಬೆಳೆಸಿರಿ.ಉಚಿತ ಕರೆಗಾಗಿ ದೂರವಾಣಿ ಸಂಖ್ಯೆ 104 ನ್ನು ಸಂಪರ್ಕಿಸಿ.
ಡೆಂಗೀಜ್ವರ ಮತ್ತು ಚಿಕುನ್ ಗುನ್ಯ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು, ಡೆಂಗೀ ಗುಣಲಕ್ಷಣಗಳು ಕಂಡು ಬಂದಾಗ, ರಕ್ತದಲ್ಲಿರುವ ಪ್ಲೇಟಲೈಟ್ ಗಳ ಕೊರತೆಯಾಗವುದೆಂಬ ವದಂತಿ ಜನಸಾಮಾನ್ಯರಲ್ಲಿ ಹರಡಿದೆ.
ಆದರೆ, ಪ್ಲೇಟ್ ಲೈಟ್ ಕಡಿಮೆಯಾದ ರೋಗಿಗಳಿಗೆ ವೈದ್ಯರು ನೀಡುವ ಒ.ಆರ್.ಎಸ್ ದ್ರಾವಣದಿಂದ ತಕ್ಷಣ ಪ್ಲೇಟ್ ಲೈಟ್ ಗಳ ಪ್ರಮಾಣ ಹೆಚ್ಚಾಗಿ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಜಿಲ್ಲಾ ರೋಗವಾಹಕ  ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಮ್.ಎಸ್.ಪಲ್ಲೇದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');