ಶಾಲಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಇಒ ವೀರನಗೌಡ ಏಗನಗೌಡರ

0
🌐 Belgaum News :

ಕಾಗವಾಡ: ಕಾಗವಾಡ  ತಾಲೂಕು ಪಂಚಾಯತ ಸಭಾಭವನದಲ್ಲಿ  ಮಂಗಳವಾರ  ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರನಗೌಡ ಏಗನಗೌಡರ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಅಂಗನವಾಡಿ ಕಟ್ಟಡ ಹಾಗೂ  ಶಾಲಾ  ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ  ನೀಡುವಂತೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನರೇಗಾ ಯೋಜನೆಯಡಿ ಶಾಲಾ ಮೈದಾನ ನಿರ್ಮಾಣ, ಕಂಪೌಂಡ ನಿರ್ಮಾಣ ಹಾಗೂ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವ ನೀಡಿ,  ಅಲ್ಲದೇ  ಕೋಟಿವೃಕ್ಷ ಅಭಿಯಾನದಡಿ  ತಾಲೂಕಿನಾದ್ಯಂತ 15  ಸಾವಿರ ಸಸಿ ನೆಡುವ ಯೋಜನೆ  ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈಗಾಗಲೇ 8 ಸಾವಿರಕ್ಕೂ ಹೆಚ್ಚು ಮುಂಗಡ ಗುಂಡಿ ತೋಡಲಾಗಿದೆ. ಮುಂದಿನ ತಿಂಗಳೊಳಗಾಗಿ ಎಲ್ಲೆಡೆ ಸಸಿ ನೆಡಬೇಕು” ಎಂದು ನಿರ್ದೇಶನ ನೀಡಿದರು.

ಮೋಳೆ, ಕೆಂಪವಾಡ ಹಾಗೂ ಕುಸನಾಳದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕ ನಿರ್ಮಿಸಿ, ಜು.‌15 ರೊಳಗಾಗಿ ಕಸವಿಲೇವಾರಿ ಮಾಡುವಂತೆ ತಿಳಿಸಿದರು.

ತಾಲೂಕಿನ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಎಂಐಎಸ್ ಸಂಯೋಜಕರು ಸಭೆಯಲ್ಲಿ ಉಪಸ್ಥಿತರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');