ಇಪ್ಪತ್ತು ಕೋಟಿ ಕಾಮಗಾರಿಗೆ ಡಿಸಿಎಮ್ ಸವದಿ ಭೂಮಿಪೂಜೆ

0
🌐 Belgaum News :

 

ಅಥಣಿ: ಪಟ್ಟಣದಲ್ಲಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಒಟ್ಟು ಇಪ್ಪತ್ತು ಕೋಟಿ ವೆಚ್ಚದ ಎರಡು ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿದರು. ಅಥಣಿ ಪಟ್ಟಣದ ಹೊರವಲಯದಲ್ಲಿ ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರೈನಿಂಗ್ ಟ್ರಾಕ್ ಮತ್ತು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಅಥಣಿ ಸಾರಿಗೆ ಘಟಕದ ಮರುನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಬಹಳ ದಿನಗಳ ಬೇಡಿಕೆಯನ್ನು ಸಾರಿಗೆ ಇಲಾಖೆಯಿಂದ ಪೂರ್ಣಗೊಳಿಸಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ನಷ್ಟದಲ್ಲಿ ಇರುವ ಸಾರಿಗೆ ನಿಗಮಗಳನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರದ ಮುಂದೆ ಹಲವು ಯೋಜನೆಗಳ ಪ್ರಸ್ತಾವಣೆ ಇದೆ. ಸಾರಿಗೆ ಘಟಕದ ಸಿಬ್ಬಂದಿಯ ಸಂಕಷ್ಟಗಳನ್ನು ಅರಿತು ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದ್ದೇವೆ.

ಅಪಘಾತಗಳಲ್ಲಿ ಮೃತಪಟ್ಟ ಚಾಲಕ ನೀರ್ವಾಹಕರ ಕುಟುಂಬಕ್ಕೆ ಅನುಕಂಪದ ನೌಕರಿ,ಅಪಘಾತದಲ್ಲಿ ಗಾಯಗೊಂಡ ಚಾಲಕ ನೀರ್ವಾಹಕರಿಗೆ ಲಘು ಕೆಲಸಗಳಿಗೆ ನಿಯೋಜನೆ ಸೇರಿದಂತೆ ಕುಟುಂಬ ಸದಸ್ಯರಂತೆ ಭಾವಿಸಿ ಸಮರ್ಪಕವಾಗಿ ಸ್ಪಂದಿಸುತ್ತಿದ್ದೇವೆ ಎಂದರು. ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳು ಸದ್ಯ ಕೊರೊನಾ ಮತ್ತು ಸಾರಿಗೆ ನೌಕರರ ಮುಷ್ಕರದಿಂದಾಗಿ ನಷ್ಟದಲ್ಲಿ ಇದ್ದರೂ ಕೂಡ ಜನರ ಸಂಕಷ್ಟವನ್ನು ಅರಿತು ಸಾರಿಗೆ ನಿಗಮಗಳು ಹೆಚ್ಚುತ್ತಿರುವ ಸ್ಪೇರಪಾರ್ಟ ದರ ಮತ್ತು ಡಿಸೇಲ್ ದರದ ನಡುವೆಯೂ ಪೈಪೋಟಿ ನಡೆಸುತ್ತಿರುವದನ್ನು ಅರಿತಿದ್ದೇವೆ.ಸಾರಿಗೆ ಸಂಸ್ಥೆ ಅತಿಹೆಚ್ಚು ನಷ್ಟದಲ್ಲಿ ಇರುವ ಸಂಸ್ಥೆಯಾಗಿದೆ 4 ಸಾವಿರ ಕೋಟಿಯಷ್ಟು ಅಂದಾಜು ನಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಅಷ್ಟೇ ಹಣವನ್ನು ಅನುದಾನವಾಗಿ ಪಡೆದು ನಾಲ್ಕು ನಿಗಮಗಳನ್ನು ಸಶಕ್ತ ಗೊಳಿಸುವ ನಿಟ್ಟಿನಲ್ಲಿ ಸ್ಪಂದಿಸಲಾಗುವದು ಎಂದರು.

ಸಾರಿಗೆ ಇಲಾಖೆಯಲ್ಲಿ ಒಂದು ಲಕ್ಷ ಇಪ್ಪತ್ತೈದು ಸಾವಿರ ಸಾರಿಗೆ ನೌಕರರು ಇದ್ದಾರೆ.ಅವರಿಗೆ ನಷ್ಟದ ನಡುವೆಯೂ ನಿರಂತರವಾಗಿ ಸಂಬಳ ನೀಡಲಾಗಿದೆ.ಕೊರೊನಾ ಮತ್ತು ಸಾರಿಗೆ ನೌಕರರ ಮುಷ್ಕರದಿಂದ ಉಂಟಾದ ಅಪಾರ ಹಾನಿಯ ನಡುವೆಯೂ ಸಾರಿಗೆ ನೌಕರರು ಯಾರೂ ನಿರಾಶರಾಗಬಾರದು ಎಲ್ಲರಿಗೂ ಸಂಬಳ ನೀಡಲಾಗುತ್ತಿದೆ ಅಲ್ಲದೆ ನಷ್ಟವನ್ನು ಸರಿದೂಗಿಸಲಾಗುವದು ಎಂದರು. ಸಾರಿಗೆ ಸಂಚಾರ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತಿದ್ದು ದೈಹಿಕ ಅಂತರ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಜರ ಜೊತೆಗೆ ಕೊರೊನಾ ನಿಯಮಾವಳಿಗಳನ್ನು ಎಲ್ಲ ಸಾರಿಗೆ ನಿಗಮಗಳಲ್ಲಿ ಪಾಲಿಸಲಾಗುವದು ಎಂದರು.

 

ಈ ವೇಳೆ ಅಪರ ಸಾರಿಗೆ ಆಯುಕ್ತರು ಮಾರುತಿ ಸಾಮ್ರಾಣಿ, ಜೆಟ್ಟಿ ಸಾರಿಗೆ ಆಯುಕ್ತರು ಬೆಳಗಾವಿ ವಿಭಾಗ ಎಮ್ ಶೊಭಾ, ಅಥಣಿ ಆರ್ ಟಿ ಒ ಭೀಮನಗೌಡ ಪಾಟೀಲ, ಎಸ್.ಬಿ ಜೋಶಿ, ವಾಯುವ್ಯ ಕರ್ನಾಟಕ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೆ, ವಾಯುವ್ಯ ಕರ್ನಾಟಕ ನಿಗಮ ಅಧ್ಯಕ್ಷ ಬಿ. ಎಸ್. ಪಾಟೀಲ, ಅಥಣಿ ಸಾರಿಗೆ ಘಟಕದ ಮ್ಯಾನೇಜರ ಎನ್. ಎಮ್ ಕೇರಿ, ಹುಬ್ಬಳ್ಳಿ ಮುಖ್ಯ ಅಭಿಯಂತರ
ಕೆ. ಬಿ ಕುಲಕರ್ಣಿ, ಚಿಕ್ಕೋಡಿ ಡಿಟಿಓ ರಾಜಶೇಖರ ವಾಜಂತ್ರಿ, ಚಿಕ್ಕೋಡಿ ಡಿ ಎಮ್ ಇ ಎ ಎಮ್ ಪಾಟೀಲ, ಹಾಗೂ ಚಿಕ್ಕೋಡಿ ಡಿಸಿ ಶಶಿಧರ ಮರೀದೇವರ ಮಠ, ಅರವಿಂದರಾವ ದೇಶಪಾಂಡೆ, ಬಿಜೆಪಿ ಮುಖಂಡರಾದ ದಿಲೀಪ್ ಲೋಣಾರೆ, ದತ್ತಾ ವಾಸ್ಟರ್, ಶಿವರುದ್ರಪ್ಪ ಗುಳಪ್ಪನ್ನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');