ಪೂಜ್ಯ ಗುರುಲಿಂಗ ಶಿವಾಚಾರ್ಯರ ಸಲಹೆ | ಮಹಾಗಾಂವ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿಶ್ವ ವನಮಹೋತ್ಸವ ದಿನಾಚರಣೆ

ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಗಿಡ-ಮರಗಳನ್ನು ಮಗುವಿನಂತೆ ಪೋಷಿಸಿ,ಸಂರಕ್ಷಿಸಿ

0

ಕಲಬುರಗಿ: ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಗಿಡ-ಮರಗಳನ್ನು ನಾಶಪಡಿಸಿದ್ದರಿಂದ ಪರಿಸರದ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಪರಿಸರ ದಿನೇ-ದಿನೇ ಅವನತಿಯತ್ತ ಸಾಗಿದ್ದು, ಇದು ಹೀಗೆಯೇ ಮುಂದುವರೆದರೆ ಇನ್ನೂ ಕೆಲವೇ ವರ್ಷಗಳಲ್ಲಿ ಪರಿಸರಕ್ಕೆ ಗಂಡಾಂತರ ತಪ್ಪಿದ್ದಲ್ಲ. ಆದ್ದರಿಂದ ಎಲ್ಲೆಡೆ ಸಸಿಗಳನ್ನು ನೆಟ್ಟು ಅವುಗಳನ್ನು ಗಿಡ-ಮರಗಳನ್ನಾಗಿ ಬೆಳೆಯಲು ಮಗುವಿನಂತೆ ಪೋಷಿಸಿ ಸಂರಕ್ಷಿಸಿಬೇಕೆಂದು ಮಹಾಗಾಂವ ಕಳ್ಳಿಮಠದ ಪೂಜ್ಯ ಗುರುಲಿಂಗ ಶಿವಾಚಾರ್ಯರು ಸಲಹೆ ನೀಡಿದರು.
ನಗರದ ಸಮೀಪದ ಮಹಾಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ‘ವಿಶ್ವ ವನಮಹೋತ್ಸವ ದಿನಾಚರಣೆ’ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಈಚೆಗೆ ಜರುಗಿದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ ಬಿರಾದಾರ ಮಾತನಾಡಿ, ನಮ್ಮ ದೇಶದ ಒಟ್ಟು ಭೂಪ್ರದೇಶದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ ಪ್ರಸ್ತುತ ಶೇ.21ರಷ್ಟಿದ್ದು, ಶೇ.12ರಷ್ಟು ಕೊರತೆಯಿದೆ. ಅರಣ್ಯಗಳ ಪ್ರಮಾಣ ಗಣನೀಯ ಪ್ರಮಾಣ ಇಳಿಕೆಯಾದ್ದರಿಂದ, ವಾಹನಗಳ ಮತ್ತು ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮೊನಾಕ್ಸೈಡ್‍ಗಳ ಪ್ರಮಾಣ ಹೆಚ್ಚಾಗಿ ಜಾಗತಿಕ ತಾಪಮಾನ ಉಂಟಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಎಲ್ಲೆಡೆ ಸಸಿಗಳನ್ನು ನೆಟ್ಟು ಪರಿಸರ ಕಾಪಾಡಬೇಕಾಗಿದೆಯೆಂದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಹಣಮಂತ ಹೊಸಮನಿ, ಉಪನ್ಯಾಸಕ ಎಚ್.ಬಿ.ಪಾಟೀಲ, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷರುಗಳಾದ ನೀಲಕಂಠಯ್ಯ ಹಿರೇಮಠ, ದೇವೇಂದ್ರಪ್ಪ ಗಣಮುಖಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಸಹ ಶಿಕ್ಷಕರಾದ ಅನಿಲಕುಮಾರ ಕೋರೆ, ದಾದಾಸಾಬ್ ಹೊಸುರ, ಶ್ರೀಮಂತ ಪಾಟೀಲ, ಶಂಭುಲಿಂಗ ಕುಂಬಾರ, ಮಲ್ಲಿಕಾರ್ಜುನ ಜಮಾದಾರ, ಪ್ರಭು ಬಿ.ಎನ್., ಸಲ್ಮಾಬೇಗ್ ಜಿ.ಎಂ., ರುದ್ರಮ್ಮ, ವೀರಮ್ಮ ಸೇರಿದಂತೆ ಮತ್ತಿತರರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');