ಕೋವಿಡ್ ಸಹಾಯಾರ್ಥ ನಿಲಜಗಿ ಕುಟುಂಬದಿಂದ ದಿನಸಿ ಕಿಟ್‍ಗಳ ವಿತರಣೆ

0

ಹುಕ್ಕೇರಿ: ಜನರ ವೇದನೆಗೆ ಸ್ಪಂದಿಸಿ ಸಹಾಯಹಸ್ತ ಚಾಚುವ ಗುಣ ಹೊಂದಿದವರು ಮಾತ್ರ ವೇದಾಂತಿಯಾಗಬಲ್ಲರು ಎಂದು ಕ್ಯಾರಗುಡ್ಡ ಅವುಜಿಕರ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯಿಂದ ಸಂಸ್ಥಾಪಕ ವಸಂತ ನಿಲಜಗಿ ಅವರ 3 ನೇ ವರ್ಷದ ಪುಣ್ಯತಿಥಿ ಸ್ಮರಣಾರ್ಥ ಕೋವಿಡ್-19 ಸಹಾಯಾರ್ಥವಾಗಿ ಏರ್ಪಡಿಸಿದ್ದ ದಿನಸಿ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡವರು, ದೀನ ದಲಿತರು, ಜೀವನದ ಸಂಧ್ಯಾ ಕಾಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರು, ರೈತರು, ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಇತರೆ ಜನರ ಕಷ್ಟ ಕಾರ್ಪಣ್ಯಗಳು ಮತ್ತು ವೇದನೆಗೆ ಧ್ವನಿಯಾಗುವವರೇ ನಿಜವಾದ ವೇದಾಂತಿ ಎನಿಸಿಕೊಳ್ಳುವರು. ಇಂಥ ಸಾಲಿನಲ್ಲಿ ಮಹಾವೀರ ನಿಲಜಗಿ ಗುರುತಿಸಿಕೊಂಡಿದ್ದು ಇಡೀ ನಿಲಜಗಿ ಕುಟುಂಬ ಬಡವರ ಬವಣೆಗೆ ಸ್ಪಂದಿಸುವ ಮನೋಭಾವ ಹೊಂದಿದೆ ಎಂದು ಅವರು ಹೇಳಿದರು.

ಇಂದಿನ ದಿನಗಳಲ್ಲಿ ಅಧಿಕಾರಕ್ಕಾಗಿ ಅಂಟಿಕೊಳ್ಳುವ ಸಾಕಷ್ಟು ಜನರನ್ನು ನಾವು ನೋಡಿದ್ದೇವೆ. ಇದಕ್ಕೆ ಅಪವಾದ ಎನ್ನುವಂತೆ ಮಹಾವೀರ ನಿಲಜಗಿಯವರು, ಅಧಿಕಾರದ ಸ್ತಂಭವಾಗದೇ ಹುಕ್ಕೇರಿ ಸೇರಿದಂತೆ ಇತರೆ ಪ್ರದೇಶಗಳ ಅನೇಕ ಜನರ ಆಧಾರಸ್ತಂಭವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜ ಸೇವೆ ಅರ್ಪಣಾ ಗುಣ, ಆದರ್ಶ ತತ್ವ ಅಳವಡಿಸಿಕೊಂಡಿರುವ ನಿಲಜಗಿಯವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಂತಿಯ ವ್ಯವಸ್ಥಾಪಕ ಶ್ರೀಕಾಂತ ಬರುವೆ, ಖಾಸಗಿ ವಾಹಿನಿ ಜಿಲ್ಲಾ ವರದಿಗಾರ ದಿಲೀಪ ಕುರಂದವಾಡೆ ಮಾತನಾಡಿದರು.

ಆಟೊ ರಿಕ್ಷಾ ಚಾಲಕರು ಸೇರಿದಂತೆ ಬಡವರಿಗೆ ಸುಮಾರು 200 ಕ್ಕಿಂತ ಹೆಚ್ಚು ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯರೂ ಆದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ, ಸ್ವಾಮಿ ವಿವೇಕಾನಂದ ಶಾಲೆ ಅಧ್ಯಕ್ಷ ಅಶೋಕ ಪಾಟೀಲ, ಮಹಾವೀರ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಸಂಜಯ ನಿಲಜಗಿ, ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಕಿರಣ ಸೊಲ್ಲಾಪುರೆ, ಸುಕುಮಾರ ಪಾಟೀಲ, ಭರಮಪ್ಪ ಲಟ್ಟಿ, ರಾಜೇಂದ್ರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಸಂಗಮೇಶ ಕರಹೊನ್ನವರ ನಿರೂಪಿಸಿದರು. ಸಂತೋಷ ರಜಪೂತ ಸ್ವಾಗತಿಸಿದರು. ಎ.ಬಿ. ಗೋಡಗೇರಿ ವಂದಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');