ಜ್ಞಾನ ವಿಲಾಸ ಕೇಂದ್ರದ ಮಾಸಿಕ ಸಭೆಯಲ್ಲಿ ಸ್ತನ ಕ್ಯಾನ್ಸರ ಕುರಿತು ಅರಿವು ಮೂಡಿಸಲಾಯಿತು.

0

ಬೆಳಗಾವಿ: ಚನ್ನಮ್ಮನ ಕಿತ್ತೂರು: ತಾಲೂಕಿನ ನೇಗಿನಹಾಳ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ನಡೆದ ಗ್ರಾಮದೇವಿ ಜ್ಞಾನ ವಿಲಾಸ ಕೇಂದ್ರದ ಮಾಸಿಕ ಸಭೆಯಲ್ಲಿ ಸ್ತನ ಕ್ಯಾನ್ಸರ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬೈಲಹೊಂಗಲ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಸೋಮಶೇಕರ ಮುತ್ನಾಳ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಅನೇಕ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು ಅದರ ಲಕ್ಷಣಗಳನ್ನು ತಾಯಿಯಂದಿರು ಕಂಡುಕೊಂಡು ಸಂಶಯ ಬಂದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಬಹು ಬೇಗನೆ ಚಿಕಿತ್ಸೆ ಪಡೆದರೆ ರೋಗ ಗುಣವಾಗುತ್ತದೆ ಎಂದ ಅವರು, ಮಹಾಮಾರಿ ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿದರು.

ಕಿತ್ತೂರು ತಾಲೂಕಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ರಾಯನಾಳ ವಾರ್ಷಿಕ ಕ್ರಿಯಾಯೋಜನೆಯನ್ನು ಕೇಂದ್ರವಾರು ವಿಂಗಡಣೆ ಮಾಡಿ ಜ್ಞಾನ ವಿಕಾಸ ಕಾರ್ಯಕ್ರಮದ ಅನು ಉತ್ತಮ ರೀತಿಯಲ್ಲಿ ಮಾಡಲು ತಿಳಿಸಿದರು.

ಈ ವೇಳೆ ಸರೋಜಿನಿ, ಮಲ್ಲಮ್ಮ ಸೇರಿದಂತೆ ಕಿತ್ತೂರು ತಾಲೂಕಿನ ಮಹಿಳಾ ಜ್ಞಾನ ವಿಕಾಶ ಕೇಂದ್ರದ ಸೇವಾ ಪ್ರತಿನಿಧಿಗಳು ಮತ್ತು ಗ್ರಾಮದೇವಿ ಜ್ಞಾನ ವಿಲಾಸ ಕೇಂದ್ರದ ಸೇವಾ ಪ್ರತಿನಿಧಿಗಳು ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');