ಕಾರ್ಮಿಕರಿಗೆ ಶಾಸಕ ಅನಿಲ ಬೆನಕೆಅವರಿಂದ ದಿನಸಿ ಕೀಟ್ ವಿತರಣೆ

0

ಬೆಳಗಾವಿ,:ದಿನಾಂಕ 07-07-2021 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಯವರಿಂದ ಕಟ್ಟಡ ಕಾರ್ಮಿಕರಿಗೆ ದಿನಸಿ ಕೀಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯುರಪ್ಪಜಿ ಹಾಗೂ ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರಅವರಿಂದ ವಿತರಣೆಯಾದ ಕಾರ್ಮಿಕರ ದಿನಸಿ ಕೀಟಗಳನ್ನು ಇಂದು ವಿತರಿಸಲಾಯಿತು.

ಕೋವಿಡ ಮಹಾಮಾರಿ 2ನೇ ಅಲೆ ಜನಸಾಮಾನ್ಯರಿಗೆ ಆರ್ಥಿಕವಾಗಿ ಹಿನ್ನಡೆ ಉಂಟುಮಾಡಿದೆ, ಜನಸಾಮಾನ್ಯರು ಲಾಕಡೌನ ನಂತರ ತಮ್ಮ ದೈನಂದಿನ ವೃತ್ತಿಗೆ ಒಳಗಾಗಬೇಕುಯಾವುದೇತರಹದ ಭಯ ಬೇಡ ವ್ಯಾಕ್ಸಿನೇಶನ ಮಾಡಿಸಿಕೊಳ್ಳಬೇಕು, ತಮ್ಮ ಹಾಗೂ ಕುಟುಂಬದ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬಿಜೆಪಿ ಮಹಾನಗರ ಎಸ.ಸಿ.ಮೊರ್ಚಾಅಧ್ಯಕ್ಷರಾದ ಮಂಜುನಾಥ ಪಮ್ಮಾರ, ಬಿಜೆಪಿ ಮಹಾನಗರ ಎಸ.ಸಿ. ಮೊರ್ಚಾಪ್ರಧಾನ ಕಾರ್ಯದರ್ಶಿಗಳಾದ ಭೀಮರಾವ ಪಾತ್ರೊಟ, ಗುರುದೇವ ಪಾಟೀಲ, ರಾಜು ಪಮ್ಮಾರ, ಗೋಪಿ ರಾಠೋಡ, ಸುರೇಶರಾಠೋಡ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');