ಬಸ್ ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ಕಾಮುಕರು..! ಇಬ್ಬರು ಆರೋಪಿಗಳು ಅಂದರ್ .. ಮೂರನೇ ವ್ಯಕ್ತಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

0

ಕೇರಳ :  ಯುವತಿಗೆ ಯಾಮಾರಿಸಿ  ಬಸ್ ನಲ್ಲೇ  ಸಾಮೂಹಿಕ ಅತ್ಯಾಚಾರ ಎಸಗಿರುವ ದುರ್ಘಟನೆ ಕೇರಳ ಕೋಯಿಕ್ಕೋಡ್ ನಲ್ಲಿ ನಡೆದಿದೆ. ಪೋಷಕರಿಗೆ ಮಾಹಿತಿ ನೀಡಿದ  ಮಗಳು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ಗೋಪಿಶ್ ಮತ್ತು ಮೊಹಮದ್ ಶಮೀರ್  ಆರೋಪಿಗಳು, ಇವರಿಬ್ಬರು ಕುನ್ನಮಂಗಲಂ ಮೂಲದವರಾಗಿದ್ದಾರೆ. ಇಂದ್ರೇಶ್ ಎಂಬ ಮತ್ತೊಬ್ಬ ಆರೋಪಿ ಕೂಡ 21 ವರ್ಷದ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿದೆ. ಆತನು ಕೂಡ  ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಮನೆಯಲ್ಲಿ ಪೋಷಕರೊಂದಿಗೆ ಜಗಳವಾಡಿದ ಮಹಿಳೆ ತನ್ನ ದ್ವಿಚಕ್ರ ವಾಹನದಲ್ಲಿ ತಿರುಗಾಡಿ ವಯಲ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಗೋಪಿಶ್ ಮತ್ತು ಶಮೀರ್ ನಿಲ್ದಾಣದಲ್ಲಿದ್ದ ಆಕೆಯನ್ನು ಗಮನಿಸಿ ಪರಿಚಯ ಮಾಡಿಕೊಂಡಿದ್ದಾರೆ.

ಬಳಿಕ ಆರೋಪಿಗಳು ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಲಾಕ್ಡೌನ್ ಕಾರಣ ನಿಲುಗಡೆ ಮಾಡಲಾಗಿದ್ದ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಮೂರನೇ ಆರೋಪಿ ಇಂದ್ರೇಶ್ ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬಳಿಕ ಮಹಿಳೆಯನ್ನು ಕನ್ನಮಂಗಲ ಆಟೋ ನಿಲ್ದಾಣದ ಬಿಟ್ಟು ಹೊರಟುಹೋಗಿದ್ದಾರೆ. ಮನೆಗೆ ಹೋದ ಯುವತಿ ಲೈಂಗಿಕ ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದು, ಪೋಷಕರು ಚೆವಯೂರ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ವಿಧಿ ವಿಜ್ಞಾನ ತಜ್ಞರು ಮತ್ತು ಫಿಂಗರ್ ಪ್ರಿಂಟ್ಸ್ ಸ್ಕ್ವಾಡ್ ತನಿಖೆ ಆಧರಿಸಿ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಮೂರನೇ ಆರೋಪಿ ಇಂದ್ರೇಶ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');