ಅಥಣಿ ಪೋಲಿಸ್ ಸಿಬ್ಬಂದಿ ರೇಣುಕಾ ಮಾದರಗೆ ಬೀಳ್ಕೊಡುಗೆ

0
ಅಥಣಿ: ಪೋಲಿಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕರ್ತವ್ಯ ನೀರ್ವಹಿಸುತ್ತಿದ್ದ ರೇಣುಕಾ ಮಾದರ ಅವರು ಪದೊನ್ನತಿ ಹೊಂದಿ ಚಿಕ್ಕೋಡಿ ಪೋಲಿಸ್ ಠಾಣೆಗೆ ವರ್ಗವಾದ ಹಿನ್ನೆಲೆಯಲ್ಲಿ ಅಥಣಿ ಪೋಲಿಸ್ ಠಾಣೆ ವತಿಯಿಂದ ಬಿಳ್ಕೊಡ ಕಾರ್ಯಕ್ರಮ ಜರುಗಿತು.ಈ ವೇಳೆ ಮಾತನಾಡಿದ ಪಿ ಎಸ್ ಐ ಕುಮಾರ ಹಾಡಕಾರ ರೇಣುಕಾ ಮಾದರ ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಮಹಿಳಾ ಪೇದೆಯಾಗಿ ಎಲ್ಲರೊಂದಿಗೆ ಬೆರೆಯುತ್ತ ಸ್ನೇಹ ಜೀವಿಯಾಗಿದ್ದ ರೇಣುಕಾ ಮಾದರ ಬಹಳಷ್ಟು ಜನ ಸಿಬ್ಬಂದಿಗೆ ಆದರ್ಶ ಸಹೋದರಿಯಾಗಿ ಕರ್ತವ್ಯ ನೀರ್ವಹಿಸಿದ್ದು ಅವರ ಮುಂದಿನ ಭಾವಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ವೇಳೆ ಅಥಣಿ ಪೋಲಿಸ್ ಠಾಣೆಯ ಪಿಎಸ್ಐ ಕುಮಾರ ಹಾಡಕಾರ. ಎ.ಎಸ್. ಐ. ವಿ. ಜಿ ಆರೆರ, ಮತ್ತು ಸಿಬ್ಬಂದಿಗಳಾದ ಆಕಾಶ ಕುರಿ, ಪ್ರಕಾಶ ಪಾಟೀಲ, ಶ್ರೀಕಾಂತ್ ಪಾಟೀಲ, ರಮೇಶ ಹಾದಿಮನಿ, ಆರ್. ಎಸ್ ಸನದಿ, ಎಸ್. ಎಲ್ ಕತ್ತಿ, ಸಂಜು ಮಾಳವ್ವಗೊಳ, ಪಿ. ಜಿ ಸಾತಪುತೆ, ಬಿ. ಜಿ ಕೆಚ್ಚರಡ್ಡಿ, ವಿಜಯ ನರಗಟ್ಟಿ, ಸಂಜು ಕಾಂಬಳೆ, ಎಸ್. ಐ ಕಲಮನಿ, ಆರ್. ಎಸ್ ಪಿಂಜಾರ, ಶಂಕರ ತೇರದಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');