ರಾಜ್ಯದ ಸಿಎಂ ಆಗಲಿದ್ದಾರೆಯೇ ಡಿ.ವಿ.ಸದಾನಂದ ಗೌಡ ?

0

ರಾಮನಗರ : ಕೇಂದ್ರ ಸಂಪುಟ ಪುನಾರಚನೆ ಹಿನ್ನೆಲೆ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಸಹ ರಾಜೀನಾಮೆ ನೀಡಿದ್ದು, ರಾಜ್ಯದ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ. ಸಿಎಂ ಪಟ್ಟ ಸದಾನಂದ ಗೌಡ ಪಾಲಾಗಲಿದೆಯೇ ? ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವರು. ಈಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುವಾಗಲೇ ಸದಾನಂದ ಗೌಡರ ರಾಜೀನಾಮೆ ಹೊಸ ಲೆಕ್ಕಾಚಾರಕ್ಕೆ ಕಾರಣ.

ಒಂದು ವೇಳೆ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬದಲಾವಣೆ ಮಾಡಿದರೆ ಡಿ. ವಿ. ಸದಾನಂದ ಗೌಡ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆಯೇ ? ಎಂಬುದು ಸದ್ಯ ಹುಟ್ಟಿರುವ ಪ್ರಶ್ನೆ. ಇನ್ನೊಂದೆಡೆ ಸಚಿವ ಯೋಗೀಶ್ವರ ಕೂಡಾ ಸಿಎಂ ಬದಲಾವಣೆ  ಆಗಲಿದ್ದಾರೆ ಎಂದು ಪುನ್ ಪುಃನ ಉಚ್ಚರಿಸಿದ್ದರು.

ರಾಜ್ಯ ರಾಜಕೀಯ ಬೆಳವಣಿಗೆ, ಬಿಜೆಪಿ ನಾಯಕರಲ್ಲಿನ ಒಳಜಗಳ,  ಸಂಸದ ರಾಜೀನಾಮೆ ನೀಡಿರುವುದು ಸೂಕ್ಷ್ಮವಾಗಿ ಗಮನಿಸಿದ್ರೆ, ಸಿಎಂ ಬದಲಾವಣೆಯಾಗಬಹುದು ಎನ್ನಲಾಗುತ್ತಿದೆ. ರಾಜಾಹುಲಿ ಸ್ಥಾನಕ್ಕೆ ಸದಾನಂದಗೌಡ ಕೂಡಿಸಬಹುದು ಎನ್ನಲಾಗುತ್ತಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');