ಗಿಡ ಮರಗಳನ್ನು ಮಕ್ಕಳಂತೆ ಪಾಲನೆ ಪೋಷಣೆಮಾಡಿ ಬೆಳಸಿರಿ: ಸುಮೀತ ಸವದಿ

0
ಅಥಣಿ: ತಾಲ್ಲೂಕಿನ ಸತ್ತಿ ಗ್ರಾಮದಲ್ಲಿ ಪರಿಸರ ಸ್ವಚ್ಚಂದವಾಗಿದ್ದರೆ ದೈಹಿಕ ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ. ನಮ್ಮ ಸುತ್ತ ಮುತ್ತ ಒಳ್ಳೆಯ ಪರಿಸರ ಉಳಿದು ಬೆಳೆಯುವಂತೆ ಪ್ರತಿಯೊಬ್ಬರೂ ಜಾಗೃಕತೆ ವಹಿಸಬೇಕು. ಹೆತ್ತ ಮಕ್ಕಳನ್ನು ಪಾಲಕರು ಕಾಳಜಿವಹಿಸಿ ಬೆಳೆಸುವಂತೆ ಗಿಡಮರಗಳನ್ನು ಬೆಳೆಸುವಾಗ ಮಕ್ಕಳಂತೆಯೇ ಪಾಲನೆ ಪೋಷಣೆ ಮಾಡಿ ಬೆಳೆಸಬೇಕೆಂದು ಯುವ ಮುಖಂಡ ಸುಮೀತ ಸವದಿ ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಬುಧವಾರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಥಣಿ ಮಂಡಲ ವತಿಯಿಂದ ಜರುಗಿದ  ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಕೊರೊನಾ ೨ ನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗಲು ಗಿಡ ಮರಗಳ ಕೊರತೆಯೇ ಕಾರಣವಾಗಿದೆ. ಒಳ್ಳೆಯ ಆರೋಗ್ಯ ನಮ್ಮದಾಗಲು ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳಸಿ ಇತರರು ಬೆಳೆಸುವಂತೆ ಪ್ರೋತ್ಸಾಹ ನೀಡಬೇಕೆಂದು ಅವರು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷ ಬಸವರಾಜ ಭಜರಂಗಿ ಮಾತನಾಡಿ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಅವರ ಕೊಡುಗೆ ಬಿ.ಜೆ.ಪಿ ಪಕ್ಷಕ್ಕೆ ಅಪಾರವಾಗಿದೆ. ಇಂದು ದೇಶದಲ್ಲಿ ಪಾರದರ್ಶಕ ಆಡಳಿತ ದೊರೆಯಲು ಇಂತಹ ವ್ಯಕ್ತಗಳ ಶ್ರಮದ ಕೊಡುಗೆಯಾಗಿದೆ ಎಂದರು.
  ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಜಡೆಪ್ಪ ಕುಂಬಾರ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ಭಜರಂಗಿ, ಅಥಣಿ ಮಂಡಲ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ ಬೆಳ್ಳಕ್ಕಿ, ಹಿರಿಯ ಮುಖಂಡ ಪ್ರಕಾಶ ಭೂಷಣ್ಣವರ, ಕಾಕಾಸಾಬ ರುದ್ರಗೌಡರ,
 ರಾಕೇಶ ಪಾಟೀಲ, ಡಾ. ಅನೂಪ್ ಗಸ್ತಿ, ಚೇತನ್ ಭೂಷಣ್ಣವರ, ಪ್ರಭು ಕುಂಬಾರ, ಉಮೇಶ ಶೇಗುಣಸಿ, ಪ್ರದೀಪ ಬಡಿಗೇರ, ನೀರುಪಾದಯ್ಯಾ ಕತ್ತಿ,  ರಾಹುಲ್ ನಾಯಿಕ, ಅನಿಲ ಭೊಸಲೆ, ಪ್ರದೀಪ ಬಡಿಗೇರ, ವಿನೋದ ಲಡಗಿ,  ಗ್ರಾ.ಪಂ. ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');