ನೂತನ ಕೇಂದ್ರ ಸಚಿವರಿಗೆ ಡಿಸಿಎಂ ಲಕ್ಷ್ಮಣ ಸವದಿ ಅಭಿನಂದನೆ

0
🌐 Belgaum News :
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ  ಕೇಂದ್ರ ಸಚಿವ ಸಂಪುಟಕ್ಕೆ ನೂತನವಾಗಿ ಕರ್ನಾಟಕದಿಂದ ಸೇರ್ಪಡೆಯಾಗಿರುವ ಸಚೀವರಿಗೆ ಡಿ ಸಿಎಮ್ ಸವದಿ ಅಭಿನಂದನೆ ಸಲ್ಲಿಸಿದರು. ಕೇಂದ್ರ ಸಚೀವ ಸಂಪುಟಕ್ಕೆ ಕರ್ನಾಟಕ ದಿಂದ ಆಯ್ಕೆ ಆಗಿರುವ
 ಶೋಭಾ ಕರಂದ್ಲಾಜೆ, ಭಗವಂತ ಖುಬಾ,  ನಾರಾಯಣ ಸ್ವಾಮಿ ಮತ್ತು ರಾಜೀವ ಚಂದ್ರಶೇಖರ್ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಡಿಸಿಎಮ್ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅನುಭವಿ ಜನಪ್ರತಿನಿಧಿಗಳಾದ ಈ ನಾಲ್ವರನ್ನು ಕೇಂದ್ರ ಸಚಿವರಾಗಿ ನಿಯುಕ್ತಿ ಗೊಳಿಸಿರುವುದು ಅತ್ಯಂತ ಸಮರ್ಥನೀಯ ಆಯ್ಕೆಯಾಗಿದೆ. ಬಿಜೆಪಿಯ ತತ್ವಸಿದ್ಧಾಂತಗಳನ್ನು ಎತ್ತಿಹಿಡಿದು,  ಜನಪರ ಆಡಳಿತವನ್ನು ನೀಡುವಲ್ಲಿ ಈ ನೂತನ ಸಚಿವರುಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಅದರ ಜೊತೆಗೆ ಈವರೆಗೆ ಕೇಂದ್ರ ಸಚಿವರಾಗಿ ಉತ್ತಮವಾಗಿ  ಕೆಲಸ ಮಾಡಿದ ಶ್ರೀ ಸದಾನಂದಗೌಡ ಅವರ ಸೇವೆಯ ಜೊತೆಗೆ ಲಿಂಗೈಕ್ಯ ಸುರೇಶ್ ಅಂಗಡಿಯವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');