ಸುಮಲತಾ ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌

0
🌐 Belgaum News :

ರಾಮನಗರ: ಸಂಸದೆಯಾಗಿ ಸುಮಲತಾ ಅಂಬರೀಷ್​ ಅವರು ಮಂಡ್ಯ ಜನತೆಯಲ್ಲಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿ ಮಂಡ್ಯ ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ. ಬಿರುಕು ಬಿಟ್ಟಿರುವ ಬಗ್ಗೆ ಟೆಕ್ನಿಕಲ್ ಟೀಂ ಮತ್ತು ಸರ್ಕಾರ ಹೇಳಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಯಾರೇ ಮಾಡುತ್ತಿದ್ದರು ನಾವು ಕೈ ಜೋಡಿಸುವುದಿಲ್ಲ: ನಿಖಿಲ್‌
2018 ರಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನ ಜೆಡಿಎಸ್ ಗೆದ್ದಿದೆ. ಏಳು ಕ್ಷೇತ್ರದಲ್ಲೂ ಜನರು ಆರ್ಶಿವಾದ ಮಾಡಿದ್ದಾರೆ. ಹಾಗಾಗಿ, ಮಂಡ್ಯದ ಜನರ ಪರ ನಿಲ್ಲುವುದು ನಮ್ಮ ಧರ್ಮ. ಆಕ್ರಮ ಗಣಿಗಾರಿಕೆ ನಡೆಯುತ್ತಿದೆ ಅಂತಾದರೆ ರಾಜ್ಯ ಸರ್ಕಾರ ಯಾವ ರೀತಿ ಬೇಕಾದರೂ ಕ್ರಮ ತೆಗೆದುಕೊಳ್ಳಲಿ. ಅಕ್ರಮ ಗಣಿಗಾರಿಕೆ ಯಾರೇ ಮಾಡುತ್ತಿದ್ದರೂ ನಾವು ಕೈ ಜೋಡಿಸುವುದಿಲ್ಲ. ನಮ್ಮ ಪಕ್ಷದವರೇ ಇದ್ದರೂ ಸಪೋರ್ಟ್ ಮಾಡುವುದಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಅಯ್ಯೋ ಪಾಪ ಏನೋ ವೀಕ್ಷಣೆ ಮಾಡಲು ಇವತ್ತು ಹೋಗಿದ್ದಾರೆ. ಒಳ್ಳೇಯದು ಆಗಲಿ ಅವರಿಗೆ. ಡ್ಯಾಂ ಗೆ ಒಂದು ಇತಿಹಾಸ ಇದೆ. ವೈಯಕ್ತಿಕ ದ್ವೇಷ ಸಾಧಿಸಲು ಈ ಮನಸ್ಥಿತಿ ಇಟ್ಟುಕೊಂಡು ಮಾತನಾಡುವುದು ಇವರಿಗೆ ಶೋಭೆ ತರಲ್ಲ.

ನಮ್ಮ ಸಂಸ್ಕೃತಿ ಏನು ಎಂಬುದು ಇಡೀ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯ ಹೇಳಿಕೆಗಳನ್ನ ಕೊಟ್ಟು, ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸುವ ಮನಸ್ಥಿತಿಗೆ ಬಂದಂತೆ ಇದೆ. ಮೊದಲು ಸಂಸದರಾಗಿ ಜನರ ಋಣ ತೀರಿಸಲಿ ಎಂದು ಸಂಸದೆ ಸುಮಲತಾ ಅಂಬರೀಷ್​ ಅವರ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ವ್ಯಂಗ್ಯವಾಡಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');