15 ದಿನ ಬಳಿಕ ಮತ್ತೆ ಲಾಕ್ ಡೌನ್ ? : ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ

0

ಚಿಕ್ಕಬಳ್ಳಾಪುರ : ಅನ್ ಲಾಕ್ ಆಗಿದೆ ಅಂತ ಜನರೇ ಮೈ ಮರೆಯಬೇಡಿ, ಸದಾ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿ, ಇಲ್ಲವಾದರೆ ಮತ್ತೆ 15 ದಿನಗಳ ನಂತರ ಈ ಹಿಂದಿನ ಲಾಕ್ ಡೌನ್ ಪರಿಸ್ಥಿತಿ ಜಾರಿ ಮಾಡಬೇಕಾಗುತ್ತೆ ಎಂದು  ಸಿಎಂ ಬಿ. ಎಸ್. ಯಡಿಯೂರಪ್ಪ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ದೊಡ್ಡಬಳ್ಳಾಪುರ ನಗರದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ ಬಳಿಕ ಮಾತನಾಡಿ, ಕೊರೊನಾ ಮೂರನೇ ಅಲೆ ಎದುರಿಸಲು ದೇಶದಲ್ಲಿ ಮೊಟ್ಟ ಮೊದಲ 70 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನ ಉದ್ಘಾಟನೆ ಮಾಡಿದ್ದೇವೆ. ಭಾರತದ ಆರು ರಾಜ್ಯಗಳಲ್ಲಿ ಮಾತ್ರವೇ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗ್ತಿದೆ.ಆದ್ರೆ ದೇಶದಲ್ಲಿ ಮೊದಲೇ ನಮ್ಮ ರಾಜ್ಯದಲ್ಲಿ ಈ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಖಾಸಗಿ ಸಂಸ್ಥೆಗಳಿಗೆ ಸರಕಾರದಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಕೋವಿಡ್ ನಂತರವೂ ಸಾರ್ವಜನಿಕರ ಸೇವೆಗೆ ಇದು ಲಭ್ಯವಾಗಲಿದೆ. ಕೊರೊನಾ ಕಂಟ್ರೋಲ್​ಗೆ ಸರ್ಕಾರ ಆನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮೂರನೇ ಅಲೆಯನ್ನ ಸಮರ್ಥವಾಗಿ ಎದುರಿಸುವ ವಿಶ್ವಾಸ ನನಗಿದೆ. ಆದರೆ ನಾನು ಸಾರ್ವಜನಿಕರಲ್ಲಿ ಒಂದು ಮನವಿ ಮಾಡ್ತೇನೆ.

ಜನರೇ ಲಾಕ್ ಡೌನ್ ಸಡಿಲ ಆಗಿದೆ ಅಂತ ಬೇಕಾಬಿಟ್ಟಿ ಒಡಾಡಬೇಡಿ, ವ್ಯಾಪಾರ ವಹಿವಾಟು ಮಾಡುವಾಗ ಎಚ್ಚರ ವಹಿಸಿ ಎಂದರು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ, ಇಲ್ಲವಾದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಬೇಕಾಗುತ್ತೆ ಅಂತ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಮತ್ತೆ 15 ದಿನಗಳ ನಂತರ ಮೊದಲ ಸ್ಥಿತಿ ತರಬೇಕಾಗುತ್ತೆ ಎಂದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');