ಇಬ್ಬರು ಮಕ್ಕಳೊಂದಿಗೆ ತಾಯಿ ಪರಾರಿ.! ಪತ್ನಿಗಾಗಿ ಠಾಣೆ ಮೆಟ್ಟಿಲೇರಿದ ಪತಿ

0

ಖಾನಾಪುರ: ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಪತ್ನಿ, ನನ್ನ ಮಕ್ಕಳನ್ನು ಹುಡುಕಿಕೊಡಿ ಎಂದು ಪತಿರಾಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಾಲೂಕಿನ ನಂದಗಡ ಗ್ರಾಮದ   ಪೂಜಾ ಕಿರಣ ರಜಪೂತ (ಡೋರ್) (24),  ಸಾಯಿನಾಥ ಕಿರಣ ರಜಪೂತ (ಡೋರ್) (11), ಆರಾಧ್ಯಾ ಕಿರಣ ರಜಪೂತ(ಡೋರ್) (04)  ಮೂವರು ಕಾಣೆಯಾಗಿದ್ದಾರೆ.

ಜೂನ್ 26 ರಂದು ರಾತ್ರಿ 11.30ರ ಸುಮಾರಿಗೆ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿದ ಹೋದವಳು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಗೆ ವಾಪಸ್ಸು ಬಂದಿರುವುದಿಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');