ಬೆಳಗಾವಿಯಿಂದ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ

0

ಬೆಳಗಾವಿ: ಅಧಿಕ ಮಳೆಯಿಂದ ತುಂಬಿ ಹರಿಯುತ್ತಿರುವ ಜಲಧಾರೆಗಳ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಸಾರಿಗೆ ಸೌಲಭ್ಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಒದಗಿಸುತ್ತಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ಜುಲೈ 3 ರಿಂದ ಆಗಸ್ಟ್ 29 ರವರೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ವಿಶೇಷ  (ಪ್ಯಾಕೇಜ್ ಟೂರ್) ವೇಗದೂತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಕ್ಕೆ ಒಬ್ಬರಿಗೆ ತಲಾ 180 ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ.

ಪ್ಯಾಕೇಜ್ ಮಾರ್ಗ ಈ ಕೆಳಗಿನಂತಿದೆ:
ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು 10 ಗಂಟೆಗೆ ಹಿಡಕಲ್ ಡ್ಯಾಮ್ ತಲುಪವುದು. ಪ್ರವಾಸಿ ತಾಣದ  1 ಗಂಟೆಯ ವೀಕ್ಷಣೆ  ನಂತರ 11 ಗಂಟೆಗೆ ಹಿಡಕಲ್ ಡ್ಯಾಮ್ ನಿಂದ  ಹೊರಟು 11.30ಕ್ಕೆ ಗೊಡಚನಮಲ್ಕಿ ತಲುಪುವುದು. 1 ಗಂಟೆ 30 ನಿಮಿಷ ಜಲಪಾತ ವೀಕ್ಷಣೆ ನಂತರ ಮಧ್ಯಾಹ್ನ 1 ಗಂಟೆಗೆ  ಗೋಕಾಕ್ ಫಾಲ್ಸ್ ಗೆ ಪ್ರಯಾಣ,  2.30 ನಿಮಿಷ ಗೋಕಾಕ್ ಫಾಲ್ಸ್ ಪ್ರವಾಸಿ ಸ್ಥಳ ವೀಕ್ಷಣೆ, ಸಂಜೆ 6 ಗಂಟೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ತಲುಪುವುದು.

ಸದರಿ ಸಾರಿಗೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಲ್ದಾಣದ ಮೇಲ್ವಿಚಾರಕರು ಕೇಂದ್ರ ಬಸ್ ನಿಲ್ದಾಣ ಬೆಳಗಾವಿ ಮೊಬೈಲ್ ಸಂಖ್ಯೆ 7760991612/ 7760991613 ಹಾಗೂ ಘಟಕದ ವ್ಯವಸ್ಥಾಪಕರು ಬೆಳಗಾವಿ-1 ಮೊ. ಸಂ 7760991625 ಸಂಪರ್ಕಿಸಬಹುದು.

ಸಾರ್ವಜನಿಕರು, ಪ್ರಯಾಣಿಕರು ಈ ವಿಶೇಷ ಸಾರಿಗೆಯ ಸದುಪಯೋಗವನ್ನು  ಪಡೆದುಕೊಳ್ಳಬೇಕೆಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ಬೆಳಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');