ಜಗ್ಗೇಶಗೆ ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ರಾಯರ ಮೇಲೆ ಆಣೆ ಮಾಡಿ ಹೇಳಲಿ; ಸೃಜನ್ ಗೆ ನಾನು ಮೋಸ ಮಾಡಿಲ್ಲ: ನಟಿ ವಿಜಯಲಕ್ಷ್ಮಿ

0

ಬೆಂಗಳೂರು: ಸದಾ ಫೇಸ್‍ಬುಕ್ ಲೈವ್ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಂಡು ಕಣ್ಣೀರು ಹಾಕುತ್ತಿರುವ ನಟಿ ವಿಜಯಲಕ್ಷ್ಮಿ ಇದೀಗ ಮತ್ತೆ ವೀಡಿಯೋ ಹರಿ ಬಿಟ್ಟಿದ್ದಾರೆ. ಈ ಬಾರಿ ನಟ ಜಗ್ಗೇಶ ಅವರೊಂದಿಗಿನ ವಿವಾದ ಕೆದಕಿದ್ದಾರೆ. ಜೊತೆಗೆ ಸೃಜನ್ ಲೋಕೇಶ್ ಜೊತೆಗಿನ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋವೊಂದನ್ನು ಹರಿಬಿಟ್ಟಿರುವ ನಟಿ ವಿಜಯಲಕ್ಷ್ಮಿ, ಅದರಲ್ಲಿ ನನ್ನ ಜೀವನದಲ್ಲಿ ಮೊದಲು ದೊಡ್ಡ ವಿವಾದ ಮಾಡಿದ್ದು ನಟ ಜಗ್ಗೇಶ್. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ದೊಡ್ಡ ವಿವಾದ ಮಾಡಿದರು. ನಾಲ್ಕು ತಿಂಗಳು ಹಲವು ಯೂನಿಯನ್‌ಗಳಿಗೆ ನನ್ನನ್ನು ಕರೆಯಿಸಿ ಕ್ಷಮಾಪಣೆ ಕೇಳುವಂತೆ ಮಾಡಿದರು. ಯಾಕೆ ಅಂತಲೇ ನನಗೆ ಅರ್ಥ ಆಗಲಿಲ್ಲ.

ಆ ವಿವಾದ ಆದಾಗ ನನ್ನನ್ನು ಕಾಪಾಡಿದ್ದು ಪಾರ್ವತಮ್ಮ ರಾಜ್‌ಕುಮಾರ್. ಅವರೇ ನನ್ನನ್ನು ಆ ವಿವಾದದಿಂದ ಮುಕ್ತಿ ಕೊಡಿಸಿದರು. ಈಗ ಪಾರ್ವತಮ್ಮ ಅವರ ಜಾಗದಲ್ಲಿ ಶಿವಣ್ಣ ಇದ್ದಾರೆ ಎಂದು ಹೇಳಿದ್ದಾರೆ.

ಜಗ್ಗೇಶ್ ಅವರು ಪ್ರತಿ ಟ್ವೀಟ್‌ ನಲ್ಲೂ ರಾಯರನ್ನು ನೆನಪಿಸಿಕೊಳ್ಳುತ್ತಾರೆ. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ಈಗಲೂ ಅವರು ರಾಯರ ಮೇಲೆ ಆಣೆ ಮಾಡಿ ಹೇಳಲಿ. ಅವರು ಹೇಳುವುದಿಲ್ಲ, ಯಾಕೆಂದರೆ ಅದು ಸುಳ್ಳು. ಆ ಸಮಯದಲ್ಲಿ ನನ್ನ ವೃತ್ತಿ ಜೀವನ ಹಾಳು ಮಾಡಲು ಅವರು ಹಾಗೆ ಮಾಡಿದ್ದರು ಎಂದು ನಟಿ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದಾರೆ.

ಸೃಜನ್ ಲೋಕೇಶ್ ಜೊತೆಗಿನ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ:
ಈ ಹಿಂದೆ ನಟಿ ಲೈವ್ ಗೆ ಬಂದು ಕಣ್ಣೀರಾಕಿದ್ದ ಸಂದರ್ಭದಲ್ಲಿ ಅನೇಕ ಮಂದಿ ಸೃಜನ್ ಗೆ ಮೋಸ ಮಾಡಿ ಬೀದಿಗೆ ಬಂದಿರುವುದಾಗಿ ಕಾಮೆಂಟ್ ಮಾಡಿದ್ದರು. ಕೆಲವು ಮಾಧ್ಯಮಗಳಲ್ಲೂ ಕೂಡ ಈ ಬಗ್ಗೆ ವರದಿಳು ಪ್ರಸಾರವಾಗಿದ್ದವು. ಈ ವಿಚಾರ ಸಂಬಂಧ ಇದೀಗ ವಿಜಯಲಕ್ಷ್ಮಿ ಅವರೇ ಲೈವ್ ಗೆ ಬಂದು ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

ಇತ್ತೀಚೆಗೆ ನನ್ನ ಹಾಗೂ ಸೃಜನ್ ಲೋಕೇಶ್ ಬಗ್ಗೆ ಬಹಳಷ್ಟು ವಿಚಾರಗಳು ಹರಿದಾಡುತ್ತಿದೆ. ನಾನು ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದೇನೆ ಅಂದಾಗ ‘ಸೃಜನ್ ಗೆ ಯಾಮಾರಿಸಿದ್ದಕ್ಕೆ ಬೀದಿಗೆ ಬಂದ್ಬಿಟ್ಟೆ’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನನ್ನ ಮಾತೃ ಭಾಷೆ ತಮಿಳು. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಯಶವಂಪುರದಲ್ಲಿರುವ ಮನೆಯಲ್ಲಿ. ನಾಗಮಂಡಲದ ಮೂಲಕ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಒಟ್ಟಿನಲ್ಲಿ ನನ್ನ ಫೌಂಡೇಶನ್ ಕರ್ನಾಟಕದಲ್ಲಿ. ಫ್ರೆಂಡ್ಸ್ ಅನ್ನೋ ತಮಿಳೂ ಚಿತ್ರದ ಮೂಲಕ ನನ್ನ ಜೀವನ ಪ್ರಾರಂಭವಾಗಿದೆ. ಇಂದಿಗೂ ಎಲ್ಲರೂ ನನ್ನ ಬೆಂಗಳೂರು ವಿಜಯಲಕ್ಷ್ಮಿ ಅಂತಾನೆ ರೆಫರ್ ಮಾಡುತ್ತಾರೆ ಎಂದರು.

ಭಾಷೆಯ ಸಮಸ್ಯೆಯಿಂದ ದೂರ:

ಎಲ್ಲರೂ ಸೃಜನ್ ಯಾಮಾರಿಸಿಬಿಟ್ಟಳು, ಬೀದಿಯಲ್ಲಿ ನಿಂತಳು ಅಂತ ಮಾತಾಡ್ತಾರೆ. ಆದರೆ ಯಾವ ಬೀದಿಯಲ್ಲಿ ನಿಂತಿದ್ದೀನಿ ಅನ್ನೋದು ನನಗೆ ಗೊತ್ತಾಗಬೇಕಿದೆ. ಲಕ್ಷ ಲಕ್ಷ ಖರ್ಚು ಮಾಡಿ ಚೆನ್ನೈನಲ್ಲಿ ಎಂಗೇಜ್ಮೆಂಟ್ ಅನ್ನು ನಾವೇ ಮಾಡಿಸಿದ್ವಿ. ನಮ್ಮ ಅಪ್ಪ ತೀರಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ನಾವು ಮೂವರು ಹುಡುಗಿಯರು ಕಷ್ಟಪಡುತ್ತಿರುವುದನ್ನು ಕಂಡ ಸೃಜನ್, ಮದುವೆ ಮಾಡಿಕೊಳ್ಳಬೇಕು ಎಂಬ ಒಳ್ಳೆಯ ಉದ್ದೇಶದಿಂದಲೇ ಬಂದಿದ್ದರು. ಮದುವೆ ಅಂತ ಬಂದಾಗ ‘ಹೋ ನೀವು ತಮಿಳುರು ಅಲ್ವಾ.. ನಾವು ಕನ್ನಡದವರು..’ ಅನ್ನೋ ಮಾತುಗಳು ಬಹಳಷ್ಟು ಬಾರಿ ಪ್ರಸ್ತಾಪ ಆಯಿತು. ಎಂಬ ಮಾತು ಬಂತು. ಇದನ್ನು ಸರಿ ಮಾಡಲು ಆಗುತ್ತಾ ಅಂತ ತುಂಬಾ ಸಮಯದವರೆಗೆ ನೋಡಿದೆ, ಹೋರಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸೃಜನ್ ಹಾಗೂ ನಾನು ಕೂತುಕೊಂಡು ಈ ಬಗ್ಗೆ ಮಾತುಕತೆ ನಡೆಸಿ, ದೂರವಾದೆವು.

ಅಂದು ನಾನು ಏನು ಅಂದ್ಕೊಂಡೆನೋ ಅದೇ ರೀತಿ ಸೃಜನ್ ಅವರ ಬದುಕು ಈಗ ಸಾಗುತ್ತಿದೆ. ಇದು ನನಗೆ ಖುಷಿ ನೀಡಿದೆ. ಆದರೆ ಜನ ನೀನು ಮಾಡಿದ ಮೋಸದಿಂದ ಬೀದಿಗೆ ಬಂದಿದ್ದೀಯಾ ಅಂತಾರೆ. ಇದು ನನಗೆ ತುಂಬಾ ನೋವು ಕೊಡುತ್ತಿದೆ. ನಾನೇನು ಮೋಸ ಮಾಡಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಕೊಂಡು, ನಂತರ ಜಗಳ ಮಾಡಿಕೊಂಡು ಆಮೇಲೆ 1 ಕೋಟಿ ಕೊಟ್ಟು ವಿಚ್ಚೇದನ ಕೊಡು ಎಂದು ನಾನು ಜಗಳ ಮಾಡಿಲ್ಲ. ಕರ್ನಾಟಕದ ಎಲ್ಲಾ ನಾಯಕಿಯರ ಜೀವನದಲ್ಲಿಯೂ ಡಿವೋರ್ಸ್ ಗಳಾಗಿವೆ. ಹಾಗೆಯೇ ಮತ್ತೆ ಮರು ಜೀವನ ಆರಂಭಿಸಿದ್ದಾರೆ. ಹಾಗಂತ ಎಲ್ಲಾ ನಟಿಯರ ಬಗ್ಗೆ ಈ ರೀತಿ ಬರೆಯಲ್ಲ. ಆದರೆ ವಿಜಯಲಕ್ಷ್ಮಿ ಬಗ್ಗೆ ಮಾತ್ರ ಈ ರೀತಿ ಬರೆಯುತ್ತೀರಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಹೀಗೆ ಅನೇಕ ವಿಚಾರಗಳ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');