ರಾಷ್ಟ್ರೀಯ ಆನ್ ಲೈನ್ ವೆಬಿನಾರ್‍ವನ್ನು ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿತ್ತು.

0

ಬೆಳಗಾವಿ: ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಆನ್‍ಲೈನ್ ಮೂಲಕ ‘ಕೊರೊನಾ ಎರಡನೇ ಅಲೆ ಮತ್ತು ಭಾರತದ ಜಡತ್ವ’ ಎಂಬ ವಿಷಯದ ಕುರಿತು ರಾಷ್ಟ್ರೀಯ ಆನ್ ಲೈನ್ ವೆಬಿನಾರ್‍ವನ್ನು ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಆರ್. ಆರ್. ಬಿರಾದಾರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಇವರು ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಕೊರೊನಾದ ಎರಡನೇ ಅಲೆಯಿಂದ ಆರ್ಥಿಕ ಪ್ರಪಂಚದಲ್ಲಿ ಹಿಂಜರಿಕೆಯುಂಟಾಗಿ ಆರ್ಥಿಕ ಪರಿಸ್ಥಿತಿಯು ಜಡತ್ವದಿಂದ ಕೂಡಿದೆ ಎಂದು ನುಡಿದರು. ಈ ಜಡತ್ವಕ್ಕೆ ಮುಖ್ಯವಾಗಿ ಲಾಕ್ ಡೌನ್, ವೆಚ್ಚ ತಳ್ಳಿತ ವೆಚ್ಚ, ಕಚ್ಚಾ ತೈಲಗಳ ಬೆಲೆಗಳ ಏರಿಕೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಬಕಾರಿ ಮತ್ತು ಆಮದು ರಪ್ತು ತೆರಿಗೆಗಳು ಕಾರಣವಾಗಿವೆ ಎಂದು ಅಂಕಿ ಸಂಖ್ಯೆಗಳ ಸಹಿತವಾಗಿ ವಿವರಣೆ ನೀಡಿದರು.

 

ಆರ್ಥಿಕ ಜಡತ್ವವನ್ನು ನಿವಾರಿಸಲು ವಿಸ್ತರಿಸಿದ ಹಣಕಾಸು ಮತ್ತು ಖಜಾನೆ ನೀತಿ ಆರ್ಥಿಕ ಜಡತ್ವವನ್ನು ನಿಯಂತ್ರಿಸಿ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಚ್ಚು ಹೆಚ್ಚು ಆರ್ಥಿಕ ಯೋಜನೆಗಳನ್ನು ಘೋಷಿಸಿ ಹಣದ ಹರಿವಿನ ಪ್ರಮಾಣ ಹೆಚ್ಚಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಎಂ. ಜಯಪ್ಪ ಅವರು ಮಾತನಾಡುತ್ತ ಕೊರೊನಾ 2ನೇ ಅಲೆಯಿಂದಾಗಿ ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ನುಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರ ಮೇಲೆ, ಕಾರ್ಮಿಕರ ಮೇಲೆ ಹಾಗೂ ಶೇರು ಮಾರುಕಟ್ಟೆಯ ಮೇಲೆ ಹೆಚ್ಚು ಗಂಭೀರ ಪರಿಣಾಮ ಆಗಿದೆ ಎಂದು ಹೇಳಿದರು. ಸರಕಾರಗಳು ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳನ್ನು ರೂಪಿಸುತ್ತಿವೆ ಎಂದು ನುಡಿದರು.

 

ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರು ಡಾ. ಅರ್ಜುನ ಜಂಬಗಿ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ರುದ್ರಪ್ಪ ಅರಳಿಮಟ್ಟಿ ವಂದಿಸಿದರು. ನಾರಾಯಣ ಗಂಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಮೂಲಕ ಈ ಕಾರ್ಯಕ್ರಮದಲ್ಲಿ 123 ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');