ಡೆಂಗೀ ವಿರೋಧಿ ಮಾಸಾಚರಣೆ ಸಾರ್ವಜನಿಕರು ಕ್ರಮ ಅನುಸರಿಸಬೇಕು: ಡಾ. ಪಲ್ಲೆದ

0
🌐 Belgaum News :

ಬೆಳಗಾವಿ, ಜು.09: ಬೆಳಗಾವಿ ಜಿಲ್ಲೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಡೆಂಗೀ ವಿರೋಧಿ ಮಾಸಾಚರಣೆಗೆ ಸಾರ್ವಜನಿಕರು ಸರ್ಕಾರದ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಡಾ. ಎಮ್.ಎಸ್.ಪಲ್ಲೇದ್ ತಿಳಿಸಿದ್ದಾರೆ.

2021 ನೇ ತಿಂಗಳಲ್ಲಿ ಡೆಂಗೀ ರೋಗ ವಿರೋಧಿ ಮಾಸವನ್ನು ಸ್ವಚ್ಛ ಪರಿಸರದಿಂದ ಆರೋಗ್ಯವಂತ ಜೀವನ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು.
ಡೆಂಗೀ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು:

ಜುಲೈ ತಿಂಗಳು ಮಳೆಗಾಲದ ಸಮಯವಾಗಿದ್ದು, ಡೆಂಗೀ ರೋಗ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ, ಆದ್ದರಿಂದ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು, ನೀರು ನಿಲ್ಲದಂತೆ ಎಚ್ಚರ ವಹಿಸಿ ನಿಂತ ನೀರಿನಲ್ಲಿ ತೈಲಾಂಶದ ಎಣ್ಣೆಯನ್ನು ಸಿಂಪಡಿಸುವುದು.
ಕಟ್ಟಡಗಳ ನಿರ್ಮಾಣ ಪ್ರದೇಶ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ಗ್ರಾಮ ಮಟ್ಟದಲ್ಲಿ ಜಾನುವಾರುಗಳು ನೀರು ಕುಡಿಯುವ ತೊಟ್ಟಿಗಳನ್ನು ಹಾಗೂ ಹೊರಾಂಗಣ ಮತ್ತು ಒಳಾಂಗಣ ನೀರು ಶೇಖರಣಾ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು.

ಶಾಶ್ವತ ನೀರಿನ ತಾಣಗಳು ಹಾಗೂ ಕಾರಂಜಿಗಳಲ್ಲಿ ಲಾರ್ವಾಹಾರಿ ಗಪ್ಪಿ ಮತ್ತು ಗ್ಯಾಂಬೊಸಿಯಾ ಮೀನು ಮರಿಗಳನ್ನು ಬಿಡುವುದು, ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು, ಸಂಜೆ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಮ್.ಎಸ್.ಪಲ್ಲೇದ್ ತಿಳಿಸಿದ್ದಾರೆ

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');