ಸೋಂಕಿನ ಅಬ್ಬರ : 97 ಮಂದಿಗೆ ಕೊರೋನಾ ಪಾಸಿಟಿವ್

0

ಚಿಕ್ಕೋಡಿ, ಬೆಳಗಾವಿಗೆ ಕಂಟಕವಾದ ಕೊರೋನಾ

ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ನಾಲ್ಕೈದು ದಿನಗಳಿಂದ ಕೊರೋನಾ   ಪ್ರಕರಣ ಸಕ್ರಿಯವಾಗಿದೆ.  ಕೊರೋನಾ ಮೂರನೇ ಅಲೆ ಅಪ್ಪಳಿಸುವ  ಲಕ್ಷಣಗಳಿವೆ.

ದೇಶ್ಯಾದ್ಯಂತ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕೊರೋನಾ ಅಲೆ ಮತ್ತೆ ಹಳ್ಳಿ-ಹಳ್ಳಿಗೂ ವ್ಯಾಪಿಸುವ ಸಾಧ್ಯತೆ ಇದೆ. ನಗರ ವ್ಯಾಪ್ತಿಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಮ ಉಲ್ಲಂಘಣೆಯಾಗಿದೆ ಎಂದು ತಜ್ಞರ  ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಗುರುವಾರ 97 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಸೋಂಕಿತರ ಸಂಖ್ಯೆ  76787 ಕ್ಕೆ ತಲುಪಿದೆ. ನಾಲ್ವರು ಬಲಿಯಾಗಿದ್ದಾರೆ.

ಸೋಂಕಿನಿಂದ 73983 ಜನರು ಗುಣಮುಖರಾಗಿದ್ದು, 813 ಸೋಂಕಿತರು ಮೃತಪಟ್ಟಿದ್ದಾರೆ. 1991 ಜನರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ತಾಲೂಕು ವಾರು ವಿವರ:

ಅಥಣಿ 6, ಬೆಳಗಾವಿ ನಗರ ಮತ್ತು ತಾಲೂಕು 34,  ಬೈಲಹೊಂಗಲ 1, ಚಿಕ್ಕೋಡಿ 34,  ಗೋಕಾಕ 3, ಹುಕ್ಕೇರಿ 2,  ಖಾನಾಪುರ 2,   ರಾಯಬಾಗ 3, ಸವದತ್ತಿ 1  ಇತರೆ 1 ಮಂದಿಗೆ  ಕೊರೋನಾ ಸೋಂಕು ತಗುಲಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');