ನೂತನ ಕೋರ್ಟ ಉದ್ಘಾಟನೆ ನಿಮಿತ್ಯ ಪರಿಶೀಲನೆ ನಡೆಸಿದ ಬೆಳಗಾವಿ ಮುಖ್ಯ ನ್ಯಾಯಾದೀಶ

0
ಬೆಳಗಾವಿ :ಕಾಗವಾಡ :ತಾಲೂಕಿನ ನೂತನ ಕೋರ್ಟ11/07/2021 ರಂದು ಉದ್ಘಾಟನೆಗೊಳ್ಳಲಿದ್ದು ಈ ಉದ್ಘಾಟನೆಗೆ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಅರವಿಂದಕುಮಾರ ಅವರು ಆಗಮಿಸುವದರಿಂದ ಕೋರ್ಟ್ ಉದ್ಘಾಟನೆಗೂ ಮುನ್ನ ಪೂರ್ವ ತಯಾರಿಯನ್ನ ಬೆಳಗಾವಿ ಮುಖ್ಯ ನ್ಯಾಯಾದೀಶ ಸಿ.ಜಿ.ಜೋಶಿ ಅವರು ಕಾಗವಾಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೋರ್ಟ್ ಪರಿಶೀಲಿಸಿದ ನಂತರ ತಮ್ಮ ಸಲಹೆ ಸೂಚನೆಗಳನ್ನು ತಮ್ಮ ಸಿಬ್ಬಂದಿಗಳಿಗೆ ನೀಡಿದರು
ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ನ್ಯಾಯಾಧೀಶರಾದ  ಸಿ.ಜಿ.ಜೋಶಿ ಮಾತನಾಡಿ,ಕಾಗವಾಡ ಪಟ್ಟಣದಲ್ಲಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದ್ದು ಈ ಭಾಗದ ತಾಲೂಕಿನ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅವರಿಗೆ ನ್ಯಾಯ ಒದಗಿಸುವಂಥ ಕಾರ್ಯದಲ್ಲಿ ಕೈಜೋಡಿಸಲಿಕ್ಕೆ ಕಾಗವಾಡ ತಾಲ್ಲೂಕಿನಲ್ಲಿ  ನ್ಯಾಯಾಲಯವನ್ನ 11  ನೇ ತಾರೀಖು ನೂತನ ಕೋರ್ಟ್ ಉದ್ಘಾಟನೆಯನ್ನ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಜಸ್ಟೀಸ್  ಅರವಿಂದಕುಮಾರ ಅವರು ಉದ್ಘಾಟನೆ ಮಾಡುವರಿದ್ದು ಜೊತೆಗೆ ಸ್ಥಳೀಯ ಮಂತ್ರಿಗಳು ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ಸಚಿನ್ ಮಗದುಮ್ ಸಹ ಆಗಮಿಸಲಿದ್ದಾರೆ
ಬರುವ ದಿನಗಳಲ್ಲಿ ಈ ಭಾಗದ ಜನರಿಗೆ ನ್ಯಾಯ ಒದಗಿಸುವಂಥ ಎಲ್ಲ ಪ್ರಯತ್ನಗಳನ್ನ ಮಾಡಬೇಕೆಂದುಕೊಂಡಿದ್ದು ಸದ್ಯಕ್ಕೆ ನ್ಯಾಯಾಲಯ ಬಾಡಿಗೆ ಕಟ್ಟಡದಲ್ಲಿ ತಾತ್ಪುರ್ತಿಕವಾದಂಥ ಕಟ್ಟಡದಲ್ಲಿ ನೆಲೆಗೊಳ್ಳಲಿದೆ ಆದಷ್ಡು ಬೇಗ ಜನರಿಗೆ ಸ್ಪಂದಿಸುವ ದೊಡ್ಡ ನ್ಯಾಯಾಲಯ ಕಟ್ಟಡ ಆಗಬೇಕು ಜನರಿಗೆ ನ್ಯಾಯ ದೇಗುಲವಾಗಿ ಅದು ಪರಿಗಣಿಸಬೇಕು ಜೊತೆಗೆ ರಾಜಿ ಮಾಡಿಕೊಳ್ಳುವ ಪ್ರಕರಣಗಳಿಗೆ ಸಂಭಂದಿಸಿದಂತೆ ಲೋಕ ಅದಾಲತ್ ಮೂಲಕ ಅವುಗಳನ್ನ ಇತ್ಯರ್ಥ ಪಡಿಸುವ ಪ್ರಯತ್ನಕ್ಕೂ ಸಹ ಕಾಗವಾಡ ತಾಲ್ಲೂಕಿನಲ್ಲಿ ಚಾಲನೆ ದೊರಕುತ್ತದೆ ಅದರಿಂದ ಜನರಿಗೆ ಅನುಕೂಲವಾಗಲಿದೆ.ಉದ್ಘಾಟನೆ ನಂತರದ ದಿನಗಳಲ್ಲಿ ಈ ಭಾಗದ ಜನರಿಗೆ ನೆಮ್ಮದಿಯ ಜೀವನ ನಡೆಸಲಿಕ್ಕೆ ಯಾವುದೇ ತಂಟೆ ತಕರಾರು ಇಲ್ಲದೇ ಜೀವನ ನಡೆಸುವಂಥ ವಾತಾವರಣವನ್ನ ಕಲ್ಪಿಸಿಕೊಡುವಂಥ ಉದ್ದೇಶವಾಗಿದೆ ಇಲ್ಲಿಯ ಮುಖ್ಯಸ್ಥರು ಈ ಭಾಗದ ವಕೀಲರು ಸಾರ್ವಜನಿಕರು ಸಹಕರಿಸಬೇಕು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಸಹಕರಿಸಬೇಕು ಎಂದು ವಿನಂತಿಸಿಕೊಂಡರು
ನಮ್ಮ ನ್ಯಾಯಾಲಯದಲ್ಲಿ ಅವಶ್ಯಕವಿರುವ ಪ್ರಕರಣಗಳು ಮಾತ್ರ ಬರಲಿ ಎಲ್ಲ ಸಣ್ಣ ಪುಟ್ಟ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಏರ್ಪಡಿಲಾಗತ್ತೆ ಅದರ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದು ಜನರಲ್ಲಿ ವಿನಂತಿಸಿಕೊಂಡರು
ಈ ವೇಳೆ ಅಥಣಿ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಪ್ಪ ಹೊನ್ನೂರ, ಚನ್ನಬಸಪ್ಪ ಕೂಡಿ ಕಾಗವಾಡ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಮ್ ಪಾಟೀಲ್, ಉಪಾಧ್ಯಕ್ಷ ಎ.ಬಿ.ಭಂಡಾರೆ,ಕಾರ್ಯದರ್ಶಿ ಸಿ.ಎಸ್.ಮಠಪತಿ,ಹಿರಿಯ ವಕೀಲರು ಎ.ಪಿ.ಅಕಿವಾಟೆ,ಎಸ್.ಡಿ.ನರವಾಡೆ,ವಾಯ್ ಬಿ ಯಡೂರೆ,ಎ.ಸಿ.ಪಾಟೀಲ್, ಎಸ್.ಆರ್.ನಿಂಬಾಳ್ಕರ್ ಪಿ.ಎಸ್.ಕನಾಳ,ಎಸ್.ಎಸ್.ದೊಂಡಾರೆ,ಅಮೀತ ದಿಕ್ಷಾಂತ,ಶಿವಾಜಿ ಕಾಂಬ್ಳೆ, ಪೋಪಟ ಕಾಂಬ್ಳೆ,ತಹಶಿಲ್ದಾರ ಪ್ರಮಿಳಾ ದೇಶಪಾಂಡೆ, ಸಿಪಿಐ ಶಂಕರಗೌಡ ಬಸಗೌಡರ,ಪಿಎಸ್ಐ ಜಾಹೀರ್ ಮೋಕಾಶಿ ಹಾಗೂ ಕಾಗವಾಡ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');