ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

0
ಜಿಲ್ಲಾ ಪಂಚಾಯತ ಬೆಳಗಾವಿ,ಬಿಮ್ಸ ಆಸ್ಪತ್ರೆ ಮತ್ತು ಅಥಣಿ ತಾಲೂಕು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಅಥಣಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.ಮದ್ಯಾಹ್ನದ ವೇಳೆಗೆ ಹತ್ತೊಂಭತ್ತು ಯುನಿಟ್ ನಷ್ಟು ರಕ್ತವನ್ನು ದಾನಿಗಳು ಉಚಿತವಾಗಿ ದಾನ ಮಾಡಿದರು.ಈ ವೇಳೆ ರಕ್ತದಾನಿಗಳಿಗೆ ಅಲ್ಪೋಪಹಾರ ಮತ್ತು ಹಣ್ಣುಗಳನ್ನು ತಾಲೂಕು ಆಸ್ಪತ್ರೆ ವತಿಯಿಂದ ವಿತರಿಸಲಾಯಿತು.ಈ ವೇಳೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಬಸಗೌಡ ಕಾಗೆ ರಕ್ತದಾನ ಶ್ರೇಷ್ಠ ದಾನವಾಗಿದ್ದು ಅಪಘಾತವಾದಾಗ ಮತ್ತು ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಇಂದಾಗಿ ಹಲವಾರು ಸಾವು ನೋವುಗಳು ಪ್ರತಿವರ್ಷವೂ ಸಂಭವಿಸುತ್ತಿದ್ದು ರಕ್ತದಾನವು ಜೀವಗಳನ್ನು ಉಳಿಸುವ ಸಂಜೀವಿನಿ ಆಗಿದೆ.ಹದಿನೆಂಟು ವರ್ಷ ಮೇಲ್ಪಟ್ಟ ವ್ಯಕ್ತಿಗಳು ಪ್ರತಿ ಮೂರು ತಿಂಗಳಲ್ಲಿ ಒಂದು ಬಾರಿ ರಕ್ತದಾನ ಮಾಡಬಹುದಾಗಿದೆ ಆದರೆ ಕೊವಿಡ್ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ದಾನಿಗಳು ಮುಂದೆ ಬರಲು ಹಿಂದೇಟು ಹಾಕುತ್ತಿದ್ದು ವ್ಯಾಕ್ಸಿನ್ ಹಾಕಿಸಿಕೊಂಡವರು ರಕ್ತದಾನ ಸದ್ಯಕ್ಕೆ ಮಾಡುವಂತಿಲ್ಲ ಆದ್ದರಿಂದ ದಾನಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಆದರೆ ತಾಲೂಕು ಆಸ್ಪತ್ರೆಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಜನರಿಂದ ಉತ್ತಮವಾದ ಸ್ಪಂದನೆ ಸಿಕ್ಕಿದೆ ಎಂದರು.
ಈ ವೇಳೆ ಡಾಕ್ಟರ್ ಹನಮಂತ ಕನಮಡಿ,ಡಾಕ್ಟರ್ ಸಿ ಎಸ್ ಪಾಟೀಲ, ಡಾಕ್ಟರ್ ರೋಹಿತ್ ಡಾಕ್ಟರ್ ವಿಜಯಕುಮಾರ ,ಲ್ಯಾಬ್ ಟೆಕ್ನಿಷಿಯನ್ ಸಂಧ್ಯಾ ನಾಯಕ, ಬಿ ಕೆ ಪಾಟೀಲ,ಸಿಬ್ಬಂದಿಗಳಾದ ಲಕ್ಷ್ಮಣ ಆಲೂರ,ಸುರೇಶ ವಾಲಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');