ಕಾಡಿನಿಂದ ನಾಡಿಗೆ ಬಂದು ಜೀವಬಿಟ್ಟ ಕಾಡುಕೋಣ

0
🌐 Belgaum News :

ಬೆಳಗಾವಿ : ಕಾಡಿನಿಂದ ನಾಡಿಗೆ ಬಂದು ಜೀವಬಿಟ್ಟ ಕಾಡುಕೋಣ.

ಕಳೆದ ಎರಡು ದಿನಗಳಿಂದ ಗ್ರಾಮದ ಸುತ್ತ ಓಡಾಡುತ್ತಿರುವ
ಕಾಡು ಕೋಣದ ಓಡಾಟದಿಂದ
ಬೆಳಗಾವಿ ತಾಲೂಕಿನ ಗೂಡಿಹಾಳ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿತ್ತು ಕಾಡುಕೋಣವೊಂದು ಕಳೆದ ಎರಡು ದಿನಗಳ ಹಿಂದೆ ಗೂಡಿಹಾಳ ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು

ತಾಲ್ಲೂಕಿನ ಕಾಕತಿ ರೇಂಜ್  ವ್ಯಾಪ್ತಿಯ ಅರಣ್ಯದಿಂದ ಆಹಾರ ಅರಸುತ್ತ ಗೋಡಿಹಾಳ ಹಾಗೂ ಗುರಾಮನಟ್ಟಿ ಗ್ರಾಮದ ಮದ್ಯೆ
ಮಾಲ್ಕಿ ಜಮೀನುಗಳಲ್ಲಿ  ಕಾಡುಕೋಣ ಸುಳಿದಾಡಿದ ಪರಿಣಾಮವಾಗಿ ರೈತರು ಕಂಗಾಲಾಗಿದ್ದರು.
ಕಾಡುಕೋಣವನ್ನು ಗಮನಿಸಿದ ಬೀದಿ ನಾಯಿಗಳು ಅದರ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ ಜೀವ ಭಯಗೊಂಡ ಕಾಡುಕೋಣ ಬೇಕಾಬಿಟ್ಟಿಯಾಗಿ ಓಡಾಡತೊಡಗಿತ್ತು ಅದನ್ನು ನಾಯಿಗಳಿಂದ ರಕ್ಷಿಸಲು
ರಕ್ಷಣೆಗೆ ಬಂದ ಗೋಡಿಹಾಳ ಹಾಗೂ ಗುರಾಮನಟ್ಟಿ ಗ್ರಾಮಸ್ಥರು ಅದು ಅರಣ್ಯದಲ್ಲಿ ಮರಳಿ ಹೋಗುತ್ತದೆ ಅಂದ್ದುಕೊಂಡಿದರು.
ಆದರೆ ಅಲ್ಲಿಯ ಬೀದಿ ನಾಯಿಗಳು  ಬೆನ್ನಟ್ಟಿದ್ದರಿಂದ ದಿಕ್ಕು ತೋಚದೆ ಬೀದಿ ನಾಯಿಗಳು ಅದರ ಮೇಲೆ ಹಲ್ಲೆಗೆ ಮುಂದಾಗಿದ್ದವು. ಜೀವ ಭಯದಿಂದ ದಿಕ್ಕು ತಪ್ಪಿ ಅಲೆಯತೊಡಗಿತ್ತು ಆದರೆ
ಗುರಾಮನಟ್ಟಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಕಾಲೇಜು ಕಟ್ಟಡ ಮಾಲೀಕ ರಸ್ತೆಯ ಬದಿಯಲ್ಲಿ ಹಾಕಿರುವ ಗೋಡೆ ಅನಾಹುತಕ್ಕೆ ಕಾರಣ ಆಗಿದ್ದು ಕಾಡುಕೋಣ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಎರಡು-ಮೂರು ಬಾರಿ ತಲೆಯಿಂದಾ ಗೋಡೆಗೆ ಹಾಯ್ದು ತಲೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಗಾಯಗೊಂಡು ಅಲ್ಲೇ ಜಮೀನಿನಲ್ಲಿ ಬಿದ್ದುಬಿಟ್ಟಿತ್ತು ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ  ವಿಷಯ ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ  ನೇತೃತ್ವದಲ್ಲಿ
ಗುರಾಮನಟ್ಟಿ  ಗ್ರಾಮಕ್ಕೆ ಬಂದು ಕಾಡುಕೋಣಕ್ಕೆ ಚಿಕಿತ್ಸೆ ಕೊಡುವ ವೇಳೆ ಅದು ಅನಾರೋಗ್ಯದಿಂದ ಬಳಲುತ್ತಿದ್ದು
ಅನಾರೋಗ್ಯ ಹಿನ್ನೆಲೆ ಕಾಡಿನಿಂದ ನಾಡಿಗೆ ಬಂದ ಕಾಡುಕೋಣ
ಕಣ್ಣು ಕಾಣದೇ ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೇ
ವಯಸ್ಸಾದ ಹಿನ್ನೆಲೆಯಲ್ಲಿ
ಕಣ್ಣು ಕಾಣದ ಸ್ಥಿತಿಯಿಂದಾಗಿ ಒಂದೇ ಜಾಗದಲ್ಲಿ ನಿಂತ ಕೋಣ ಆಹಾರ ಸಿಗದೇ ಮುಂದೆ ಹೋಗಲೂ ಆಗದೇ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿರುವದನ್ನು ನೋಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡು ಕೋಣಕ್ಕೆ ಚಿಕಿತ್ಸೆ ನೀಡಿ ಉಪಚರಿಸಿದರು .ಗ್ರಾಮಸ್ಥರು ಹಾಗೂ ಸ್ಥಳಿಯ ನಿವಾಸಿಗಳು ಅರಣ್ಯ ಇಲಾಖೆಯವರ  ಗಮನಕ್ಕೆ ಈ ವಿಷಯ ತಂದಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರ ಸಮಕ್ಷಮ ಕಾಡುಕೋಣವನ್ನು ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದರು ಆದರೆ ಚಿಕಿತ್ಸೆ ಫಲಕಾರಿಯಾಗದೆ  ಕಾಡುಕೋಣ ಸಾವನ್ನಪ್ಪಿದೆ ಎಂದು ಕಾಕತಿ ವಲಯ ಅರಣ್ಯಾಧಿಕಾರಿಗಳು ತಿಳಿಸಿದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');