ಕೊರೋನಾ ವಾರಿಯರ್ಸ್‌ ಗಳಿಗೆ ಆರೋಗ್ಯ ಕಿಟ್ ವಿತರಣೆ

0
ಬೆಳಗಾವಿ : ಅಥಣಿ ವರದಿ  ದೇಶದಲ್ಲಿ ಕೊರೋನಾ ಸೋಂಕಿನ ಅಟ್ಟಹಾಸ ಸಂಪೂರ್ಣ ಕಡಿಮೆಯಾಗಿದ್ದು ಇನ್ನೂ ಮುಂದೆ ಬರುವ ಮೂರನೇಯ  ಅಲೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಕೊರೊನ ವಾರಿಯರ್ಸ ಗಳಿಗೆ ಆರೋಗ್ಯ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು 
ಅಧಿಕಾರಿಗಳ ಜೊತೆ ಸೇರಿ ಯಾಕ್ಷನ್ ಎಡ್ ಸಂಸ್ಥೆಯು ಕೂಡ ಸಹಾಯಕ್ಕೆ ಮುಂದಾಗಿದೆ. ಕೊರೋನಾ ಸೋಂಕಿತ ಬಡವರು, ನಿರ್ಗತಿಕರಿಗೆ ಪಡಿತರ ವಿತರಣೆ ಮೂಲಕ ಆಕ್ಷನ್ ಏಡ್ ಸಂಸ್ಥೆ ಸಹಾಯಕ್ಕೆ ನಿಂತಿದ್ದಲ್ಲದೆ  ಕೊರೊನಾ ಪ್ರಂಟ್ ಲೈನ್ ವಾರಿಯರ್ ಗಳ ಬೆನ್ನಿಗೆ ನಿಲ್ಲುವ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಆರೋಗ್ಯ ಕಿಟ್ ಗಳನ್ನು ವಿತರಿಸಲು ತಾಲೂಕಾ ವೈಧ್ಯಾದಿಕಾರಿ ಬಸಗೌಡ ಕಾಗೆ ಅವರಿಗೆ ಆಕ್ಷನ್ ಏಡ್ ಸಂಸ್ಥೆಯಿಂದ ಹಸ್ತಾಂತರಿಸಲಾಯಿತು.
ಈ ವೇಳೆ ತಾಲುಕಾ ವೈದ್ಯಾಧಿಕಾರಿ ಬಸಗೌಡ ಕಾಗೆ ಮಾತನಾಡಿ ನಮ್ಮ ಆರೋಗ್ಯ ಇಲಾಖೆಗೆ ಆಕ್ಷನ್ ಏಡ್ ಸಂಸ್ಥೆಯಿಂದ ಮಾಸ್ಕ, ಪೇಸ್ ಸಿಲ್ಡ್,ಪಿಪಿಇ ಕಿಟ್ಟ ಇನ್ನೂ ಹಲವಾರು ಆರೋಗ್ಯಕ್ಕೆ ಸಂಬಂದಿಸಿದ ಕಿಟ್‌ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ ಈ ಹಿಂದೆಯು ಕೂಡಾ ಔಷಧಿಗಳನ್ನು ಕೊಟ್ಟು ಈ ಸಂಸ್ಥೆವು ಮಾನವಿಯತೆ  ಮೇರೆದಿದೆ ಎಂದರು
ಇನ್ನೂ ಸಂಸ್ಥೆಯ ಜಿಲ್ಲಾ ಸಂಚಾಲಕ ನಾಮದೇವ ಹೀರೆಕೊಡಿ ಮಾತನಾಡಿ
ಕಳೆದ ಎರಡು ವರ್ಷಗಳಿಂದ ಕೊರೊನ ಹಾಗೂ ಪ್ರವಾಹದ ಸಂದರ್ಭದಲ್ಲಿ 250 ಪಿಪಿಇ ಕಿಟ್ಟ,ಮೆಡಿಸಿನ್, ಮಾಸ್ಕ ಮತ್ತು ಇನ್ನಿತರ ವೈಧ್ಯಕೀಯ ಸಾಮಗ್ರಿಗಳನ್ನು ಎರಡು ಕೊರೊನ ಕೇಂದ್ರಗಳಾದ ಅಥಣಿ ಮತ್ತು ಚಿಕ್ಕೊಡಿಯಲ್ಲಿ ಯಾಕ್ಷನ್ ಏಡ್ ಸಂಸ್ಥೆಯಿಂದ  ವೈದ್ಯಕೀಯ ಕಿಟ್ಟ ಗಳನ್ನು ಕೊಟ್ಟಿದ್ದೆವೆ ಇದು ಮುಂದೆ ಬರುವಂತಹ ಮೂರನೇಯ ಅಲೆಯ ವೇಳೆ ವೈದ್ಯಕೀಯ ಸಿಬ್ಬಂದಿಗೆ ಯಾವುದೆ ಅಡೆತಡೆಗಳು ಬರದಹಾಗೆ ಸಹಕಾರಿಯಾಗಲಿದೆ ಎಂದರು
ಈ ಸಂದರ್ಭದಲ್ಲಿ ರಮೇಶ ಸಜ್ಜನ, ಸುರೇಶ ವಾಲೀಕರ, ನಜೀರ ಗೊಟ್ಯಾಳ, ಬಾಬು ಕಂಟಿಕರ, ಸತೀಶ ದರೂರ, ವಾಲಂಟರ್ಸಗಳಾದ ರಾಮು ಪುಜೇರಿ, ನಾಗರಾಜ ಕಾಂಬಳೆ, ವಿಲಾಸ ಕಾಂಬಳೆ, ಭಾಗ್ಯ ಕಾಂಬಳೆ ಇನ್ನೂ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');