ಕೃಷ್ಣಾ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ನೀಡಿದ ಕಾಗವಾಡ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ

0
🌐 Belgaum News :

ಕಾಗವಾಡ:ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ನಾಳೆಯಿಂದ ಭಾರಿ ಮಳೆ ಬೀಳುವ ಸಂಭವವಿದ್ದು ಕೃಷ್ಣಾ ನದಿಗೆ ಹೆಚ್ಚಿನ ನದಿ ನೀರು ಹರಿದು ಬರಲಿದ್ದು ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಗವಾಡ ತಾಲ್ಲೂಕಾಡಳಿತದ ವತಿಯಿಂದ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಬಾರಿಸಿ ಎಚ್ಚರ ವಹಿಸಲು ಸೂಚಿಸಲಾಗುತ್ತಿದೆ

ಕಾಗವಾಡ ತಾಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ಜುಗುಳ,ಮಂಗಾವತಿ,ಶಹಾಪೂರ,ಕುಸನಾಳ ಮೊಳವಾ ಉಗಾರ ಕೆಎಚ್,ಬಣಜವಾಡ,ಕೃಷ್ಣಾ ಕಿತ್ತೂರು ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಯವರು ಡಂಗೂರ ಸಾರಿ ಗ್ರಾಮಸ್ಥರನ್ನ ಎಚ್ಚರಿಸುವಂತೆ ಕಾಗವಾಡ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ ಎಲ್ಲ ಗ್ರಾಮ ಪಂಚಾಯತಿಯವರಿಗೆ ಆದೇಶ ನೀಡಿದ್ದಾರೆ ಜೊತೆಗೆ ಅವರು ಪ್ರತಿ ಗ್ರಾಮಗಳಿಗೆ ತೆರಳಿ ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ

ಇದೆ ವೇಳೆ ಮಾತನಾಡಿದ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ,ಬರುವ ನಾಲ್ಕೈದು ದಿನಗಳಲ್ಲಿ ಭಾರಿ ಮಳೆ ಸಂಭವವಿದ್ದು ಈ ಮಳೆಯಿಂದಾಗಿ ಪ್ರವಾಹ ಎದುರಾಗುವ ಪರಿಸ್ಥಿತಿ ಇದೆ ಹೀಗಾಗಿ ತಾಲ್ಲೂಕಾಡಳಿದಿಂದ ಎಲ್ಲ ಗ್ರಾಮಗಳಲ್ಲಿ ಇದರ ಬಗ್ಗೆ ವಿಶೇಷ ಸಭೆ ಕರೆದು ಜನರಿಗೆ ತಿಳುವಳಿಕೆ ನೀಡುವಂತೆ ಹಾಗೂ ಗ್ರಾಮಗಳಲ್ಲಿ ಡಂಗೂರ ಸಾರಿ ಜನರನ್ನ ಎಚ್ಷರಿಸುವಂತೆ ಸೂಚನೆ ನೀಡಲಾಗಿದ್ದು ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಡಂಗೂರ ಸಾರಿ ಎಚ್ಚರಿಸಿದ ವರದಿ ಬಂದಿವೆ ಒಟ್ಟಿನಲ್ಲಿ ಕಾಗವಾಡ ತಾಲ್ಲೂಕಿನಲ್ಲಿ ಪ್ರವಾಹ ಎದುರಿಸಲು ತಾಲ್ಲೂಕಾಡಳಿತ ಸರ್ವಸನ್ನದ್ದವಾಗಿದೆ ಎಂದು ಹೇಳಿದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');