ನೂರು ಸಸಿ ನೆಟ್ಟ ಎಚ್ ಡಿ ಎಪ್ ಸಿ ಬ್ಯಾಂಕ ಸಿಬ್ಬಂದಿಗಳು

0
ಬೆಳಗಾವಿ : ನೂರು ಸಸಿ ನೆಟ್ಟ ಎಚ್ ಡಿ ಎಪ್ ಸಿ ಬ್ಯಾಂಕ ಸಿಬ್ಬಂದಿಗಳು ಎಚ್ ಡಿ ಎಪ್ ಸಿ ಬ್ಯಾಂಕ್ ಅಥಣಿ ವತಿಯಿಂದ ಅಥಣಿ ಪಟ್ಟಣದ ಶಿವಯೋಗಿ ನಗರದಲ್ಲಿ ೧೦೦ ಸಸಿಗಳನ್ನು ನೆಡುವ ಕಾರ್ಯಕ್ರಮ ನೆರವೇರಿತು. ಜಾಗತಿಕ ತಾಪಮಾನ ಹೆಚ್ಚಳ,ವಾತಾವರಣದಲ್ಲಿ ನ ಏರುಪೇರು ಮತ್ತು ಆಕ್ಸಿಜನ ಕೊರತೆಯನ್ನು ತಡೆಯುವಲ್ಲಿ ಗಿಡಮರಗಳು ಸಹಕಾರಿಯಾಗಿದ್ದು ಪರಿಶುದ್ಧ ವಾತಾವಾರಣದಿಂದ ಮನಸ್ಸು ಪ್ರಪುಲ್ಲವಾಗುತ್ತದೆ ಎಂದು ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.
 
ಈ ವೇಳೆ ನೂರಕ್ಕು ಅಧಿಕ ಸಸಿಗಳನ್ನು ನೆಟ್ಟು ಅವುಗಳಿಗೆ ನೀರುಣಿಸುವ ಮೂಲಕ ಸ್ಥಳಿಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಯಿತು.ಈ ವೇಳೆ ಮಾತನಾಡಿದ ಅಥಣಿ ಎಚ್ ಡಿ ಎಪ್ ಸಿ ಬ್ಯಾಂಕ ವ್ಯವದ್ಥಾಪಕ ಮಂಜುನಾಥ ಲೋಕಂಡೆ ಉತ್ತಮ ಪರಿಸರ ನಮ್ಮದಾಗಬೇಕಾದರೆ ಗಿಡಮರಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು,ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗುತ್ತಿದ್ದು .
ಕಾಂಕ್ರೀಟ್ ಕಾಡು ಬೆಳೆಯುವ ಮೂಲಕ ಪರಿಸರ ಸಮತೋಲನ ಕೆಡಲು ಕಾರಣವಾಗುತ್ತಿದೆ.ಮಳೆ ಮತ್ತು ಬೆಳೆ ಚೆನ್ನಾಗಿ ಆಗಬೇಕಾದರೆ ಗಿಡಮರಗಳು ಚೆನ್ನಾಗಿ ಬೆಳೆದಾಗ ಮಾತ್ರ ಸುಂದರ ಪರಿಸರ ನಮ್ಮದಾಗುತ್ತದೆ.ಮನುಷ್ಯನ ಆಯುಷ್ಯ ಆರೋಗ್ಯ ವೃದ್ದಿಸಲು ಗಿಡಮರಗಳು ಸಹಕಾರಿಯಾಗಿವೆ ಎಂದರು.ಈ ವೇಳೆ ಭೀಮಪ್ಪ ಕಾಲತಿಪ್ಪಿ,ಚೇತನ ಮದ್ದಪ್ಪನವರ,ನಾಗೇಶ ಕಾಳಪ್ಪನ್ನವರ,ಭರತೇಶ ಹಗೇದ,ಪ್ರಭು ಶಿರಸ್ಯಾದ,ಲಕ್ಕಪ್ಪ ಸೊಣ್ಣದ,ವಿನಾಯಕ ನರಗುಂದ,ಶಿವಾನಂದ ಮಗದುಮ್,ಯಲ್ಲಪ್ಪ ಬಂಢಗರ,ಕಿಶೋರ ಬಮನಳ್ಳಿ,ದೇವಿಪ್ರಸಾದ ಪಾಟೀಲ,ಸದಾಶಿವ ಕೊಂಪಿ,ಮಹಂತೇಶ್ ಸಿಂಧೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');