ವಿಶ್ವನಾಥ ಕತ್ತಿ ದಂತ ವಿದ್ಯಾಲಯದ ಸ್ನಾತಕೊತ್ತರ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ

0

 

ಬೆಳಗಾವಿ-ಜು.10-ಕೊವಿಡ್ ಸಂದರ್ಭದಲ್ಲಿಯು ದಂತ ವೈದ್ಯಕೀಯ ವಿಧ್ಯಾರ್ಥಿಗಳ ಪ್ರತಿಭೇಯ ಉತ್ತೇಜನಕ್ಕಾಗಿ ಇತ್ತೀಚೆಗೆ ರಾಷ್ಟ್ರದ ವಿವಿಧ ಸ್ಥಳಗಳಲ್ಲಿ ವಿಶ್ವ ಆರೋಗ್ಯ ದಿನ, ವಿಶ್ವ ತಂಬಾಕುರಹಿತ ದಿನ ಹಾಗೊ ಭಾರತೀಯ ದಂತ ಆರೋಗ್ಯ ಸಂಸ್ಥೆಯ ದಿನದ ಅಂಗವಾಗಿ ರಾಷ್ಟ್ರಮಟ್ಟದಲ್ಲಿ ನಡೆದ ಅನೇಕ ಪ್ರತಿಭಾ ಸ್ಪರ್ಧೆಗಳಲ್ಲಿ ಬೆಳಗಾವಿಯ ಕೆ.ಎಲ್.ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಸ್ನಾತಕೊತ್ತರ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಅನೇಕ ಪ್ರಶಸ್ತಿಗಳನ್ನ ಗಳಿಸಿ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ರಾಷ್ಟ್ರಮಟ್ಟದ ಈ ಪ್ರತಿಯೊಂದು ಸ್ಪರ್ಧೆಗಳಲ್ಲಿ ಸುಮಾರ 200 ಕ್ಕೊ ಅಧಿಕ ವೈದ್ಯರುಗಳು ಭಾಗವಹಿಸಿದ್ದರು.

1. ಡಾ.ಅತ್ರಿಯಾ ಪೈ ಕೋತ್- ಐಸಿಪಿಎ ಆರೋಗ್ಯ ಉತ್ಪಾದನ ಸಂಸ್ಥೆ ಆಯೋಜಿಸಿದ ಭವಿಷ್ಯದ ಅವಿಷ್ಕಾರಗಳ ಮುನ್ಸೊಚನೆ ವಿಷಯ ಕುರಿತ ಸ್ಪರ್ದೆಯಲ್ಲಿ ಪ್ರಥಮ ರ್ಯಾಂಕ್‍ಗಳಿಸಿದ್ದಾರೆ
2. ಡಾ. ಅಭ್ರಾ ರಾಯ್ ಚೌಧರಿ ಮತ್ತು ಡಾ.ಅತ್ರಿಯಾ ಪೈ ಕೋತ್ ಅನಿಲ್ ನೀರುಕೊಂಡ ದಂತ ನವೈದಗ್ಯಕೀಯ ವಿಙ್ಞನ ಸಂಸ್ಥೆ ಮತ್ತು ಐಎಪಿಹೆಚ್‍ಡಿ ಆಯೋಜಿಸಿದ ಜಿಗ್ಸಾ ಪಜಲ್ ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ
3. ಡಾ. ಅಭ್ರಾ ರಾಯ್ ಚೌಧರಿ- ಕಾರ್ಸಿನೊಜೆನೆಸಿಸ್, ಬಾಯಿ ಕ್ಯನ್ಸರ್ ಸಂಶೋಧನ ಸಂಸ್ಥೆ ಹಾಗು ಅಮೃತ ವೈದ್ಯಕೀಯ ಮಹಾ ವಿದ್ಯಾಲಯ ಆಯೋಜಿಸಿದ ಪ್ರಬಂದ ಸ್ಪರ್ದೆಯಲ್ಲಿ 3ನೇ ಬಹುಮಾನ ಗಳಿಸಿದ್ದಾರೆ

4. ಡಾ.ಮೆಹಲ್ ಷಾಹ ಇವರು ಐಎಪಿಹೆಚ್‍ಡಿ ಕೇರಳ ಛಾಪ್ಟರ್ ಆಯೋಜಿಸಿದ ಆರೋಗ್ಯ ಶಿಕ್ಷಣ ಕುರಿತ ಫಿನಿಕ್ಸ-2021 ವರ್ಚುಯಲ್ ಸ್ಪರ್ದೆಯಲ್ಲಿ ದ್ವಿತಿಯ ಬಹುಮಾನ ಗಳಿಸಿದ್ದಾರೆ
5. ಡಾ.ರಾಮ್ ಸೊರತ್‍ಕುಮಾರ್ – ಐಎಪಿಹೆಚ್‍ಡಿ ಕೇರಳ ಛಾಪ್ಟರ್ ಆಯೋಜಿಸಿದ ವರ್ಚುಯಲ್ ಸ್ಮಾರ್ಟ ಐಡಿಯಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
6.ಡಾ.ಮೆಹಲ್ ಷಹಾ- ಐಎಪಿಹೆಚ್‍ಡಿ ಕೇರಳ ಛಾಪ್ಟರ್ ಆಯೋಜಿಸಿದ ಫಿನಿಕ್ಸ-2021 ವರ್ಚುಯಲ್ ಸಮ್ಮೇಳನದಲ್ಲಿ ಹಳೆಯ ಛಾಯಚಿತ್ರ ಸಂಗ್ರಹ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
7. ಡಾ.ಅತ್ರಿಯಾ ಪೈ ಕೋತ್ ಇವರು ಐಎಪಿಹೆಚ್‍ಡಿ ಕೇರಳ ಛಾಪ್ಟರ್ ಆಯೋಜಿಸಿದ ಫಿನಿಕ್ಸ-2021 ವರ್ಚುಯಲ್ ಸಮ್ಮೇಳನದಲ್ಲಿ ಹಳೆಯ ಛಾಯಚಿತ್ರ ಸಂಗ್ರಹ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಇವರ ಈ ಎಲ್ಲ ಸಾಧನೆಗೆ ಕೆ.ಎಲ್.ಇ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ ಹಾಗು ವಿಭಾಗದ ಮಖ್ಯಸ್ಥರಾದ ಡಾ.ಅನಿಲ ಆಂಕೊಲ, ಮತ್ತು ವಿಭಾಗದ ಮತ್ತು ವಿದ್ಯಾಲಯದ ಎಲ್ಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');