ಮೂಡಲಗಿ : ಪ್ರೆಸ್ ಕ್ಲಬ್ ಸದಸ್ಯರಿಗೆ ಮಾಸ್ಕ್, ಸ್ಯಾನಿಟೈಜರ ವಿತರಣೆ

0

ಮೂಡಲಗಿ : ಅನ್‍ಲಾಕ್ ಸಮಯದಲ್ಲಿ ಪತ್ರಕರ್ತರು ಸುದ್ದಿ ಸಂಗ್ರಹಣೆಗಾಗಿ ಅಲೆದಾಡುವ ಸಂದರ್ಭದಲ್ಲಿ ಸುರಕ್ಷಿತವಾಗಿರಲೆಂದು ಗ್ರಾಮೀಣ ಕೂಟದ ಮಾಸ್ಕ್, ಸ್ಯಾನಿಟೈಜರ ವಿತರಣೆ ಕಾರ್ಯವು ಶ್ಲಾಘನೀಯವಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಎಲ್.ವೈ. ಅಡಿಹುಡಿ ಹೇಳಿದರು.

ಗ್ರಾಮೀಣ ಕೂಟ ಕಿರು ಹಣಕಾಸು ಸಂಸ್ಥೆ ವತಿಂದ ಪ್ರೆಸ್‍ಕ್ಲಬ್ ಸದಸ್ಯರಿಗೆ ಮಾಸ್ಕ್, ಸ್ಯಾನಿಟೈಜರ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ ಎರಡನೆ ಅಲೆಯ ಅಂದರ್ಭದಲ್ಲಿ ಸಾಕಷ್ಟು ಪತ್ರಕರ್ತರು ಕೊರೋನಾಗೆ ಬಲಿಯಾಗಿದ್ದಾರೆ. ಸರ್ಕಾರ ಅವರ ಕುಟುಂಬಗಳಿಗೆ ನೆರವು ನೀಡಬೇಕು ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ವಿವಿಧ ಸೌಲಬ್ಯಗಳನ್ನು ನೀಡಬೇಕು ಎಂದರು.

ಶಾಖಾ ವ್ಯವಸ್ಥಾಪಕ ಗೋಪಾಲ ಜಾಗನೂರಿ ಮಾತನಾಡಿ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವದರಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯುವದರ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಸ್ಯಾನಿಟೈಜರ ಬಳಿಸಬೇಕು. ಅನ್‍ಲಾಕ್ ಆಗಿದೆಯಂದು ಜನ ಮೈಮರೆಯದೆ ಎಚ್ಚರ ವಹಿಸಬೇಕು ಎಂದರು. ಶಾಖಾ ಸಿಬ್ಬಂದಿ ಮಲ್ಲಿಕಾರ್ಜುನ ಮಠಪತಿ,ಪತ್ರಕರ್ತರು ಇದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');