ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಬ್ರಾಹ್ಮಣ ವಿರೋಧಿಯಲ್ಲ ಬ್ರಾಹ್ಮಣಿಕೆ ವಿರೋಧಿ

0

ಬೆಳಗಾವಿ : ಬಾಬಾಸಾಹೇಬ ಅಂಬೇಡ್ಕರ ಅವರ ಅಭಿಪ್ರಾಯ ಎಲ್ಲಾ ಹಿಂದುಗಳನ್ನು ಒಂದು ಗೂಡಿಸಬೇಕು ಎಂದು ಅವರ ಅಭಿಪ್ರಾಯ. ಮತ್ತು ಕೇವಲ ದಲಿತ ಹಾಗೂ ಅಸ್ಪಶ್ಯತೆ ಈ ಸಮಾಜದಿಂದ ಪ್ರತ್ಯಕವಾಗಿ ಉಳಿಯಬೇಕು ಎಂದು ಎಲ್ಲಿಯೂ ಹೇಳಿಲ್ಲ ನಮ್ಮನು ಸಹ ಹಿಂದೂ ಸಮಾಜದಲ್ಲಿ ಬಹು ಮುಖ್ಯವಾಗಿಯೇ ನಮ್ಮನು ತೆಗೆದುಕೊಂಡು ಹೋಗಬೇಕು ಅದು ನಮ್ಮ ಧರ್ಮ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಬ್ರಾಹ್ಮಣ ವಿರೋಧಿಯಲ್ಲ ಬ್ರಾಹ್ಮಣಿಕೆ ವಿರೋಧಿ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ. ಸಾಬಣ್ಣ ತಳವಾರ ಹೇಳಿದರು.

ನಗರದ ಎಂ.ಕೆ.ಹುಬ್ಬಳ್ಳಿಯ ಅನುಭವ ಮಂಟಪದಲ್ಲಿ ಧಾರವಾಡ ರಂಗಾಯಣದಿಂದ ಸರ್ವರಿಗೂ ಸಂವಿಧಾನದ ನಾಟಕ ಸಿದ್ಧತೆ ಹಾಗೂ ತಯಾರಿ ಕಾರ್ಯಕ್ರಮದಲ್ಲಿ ಅವರು ಡಾ.ಬಾಬಾಸಾಹೇಬ ಅಂಬೇಡ್ಕರ ಮತ್ತು ರಾಷ್ಟ್ರೀಯತೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಧಾರವಾಡ ರಂಗಾಯಣವು 7 ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿದೆ. ಮೂದಲನೆ ಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ರಂಗ ಚಟುವಟಿಕೆ ಮಾಡುತ್ತಿರುವುದು. ಶ್ಲಾಘನೀಯ ವಿಷಯ ರಂಗಾಯಣವು ತನ್ನದೆ ಆದ ರಂಗದೌತನವನ್ನು ಉನಬಡಿಸುತ್ತಿದೆ. ಸರ್ವರಿಗೂ ಸಂವಿಧಾನ ನಾಟಕಕ್ಕೆ ನಾನು 1 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ. ಮತ್ತು ರಂಗಾಯಣವು ಇದೇ ರೀತಿ 7ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ನೀಡುವಂತಾಗಲಿ ಹಾಗೂ ಭಾರತ ಸಂವಿಧಾನ ಸಿದ್ಧತೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪಾತ್ರ ಈ ವಿಷಯದ ಬಗ್ಗೆ ಉಪಾನ್ಯಾಸವನ್ನು ಡಾ. ಅಂಬೇಡ್ಕರ ಪ್ರತಿಷ್ಠಾನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾಜಿ ಉಪಾಧ್ಯಕ್ಷರಾದ ಎಫ್.ಎಚ್.ಜಕ್ಕಪ್ಪನವರ ಹೇಳಿದರು.

ಪಕ್ಷ ಮತ್ತು ಜಾತಿ, ಭಾವನೆಗಳು ಬರಬಾರದು. ಬಾಬಾಸಾಹೇಬ ಅಂಬೇಡ್ಕರ ಕನಸು ನನಸಾಗಬೇಕು. ಸರ್ವರಿಗೂ ಸಂವಿಧಾನವು ಮನೆ ಮನೆಗೂ ಹಾಗೂ ಎಲ್ಲ ಮನ ಮನಗಳಿಗೂ ಮುಟ್ಟಬೇಕು. ಹಾಗೂ ಧಾರವಾಡ ರಂಗಾಯಣವು ಧಾರವಾಡಕ್ಕೆ ಅಷ್ಟೆ ಸೀಮಿತವಲ್ಲ ಏಳು ಜಿಲ್ಲೆಗಳಿಗೂ ಸೀಮಿತವಾಗಿದೆ. ಪ ಜಾ, ಪ ಪಂ, ವರ್ಗದವರೂ ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸಿಕೊಳ್ಳಬೇಕು. ಹಾಗೂ ಅಂಬೇಡ್ಕರ ಅವರು ಸಂವಿಧಾನ ರಚಿಸಿ ನಿಜವಾದ ಪ್ರಜಾಪ್ರಭುತ್ವವನ್ನು ಸೃಷ್ಟಿಸಿದ್ದಾರೆ. ಸವರ್ಣಿಯರು ಮತ್ತು ಅಸ್ಪಶ್ಯರು ಒಂದಾಗಬೇಕು ಎಂದು ರಂಗಾಯಣದ ನಿರ್ದೇಶಕರಾದ ರಮೇಶ ಎಸ್. ಪರವಿನಾಯ್ಕರ ಹೇಳಿದರು. ಫಕ್ಕೀರಪ್ಪ ಮಾಧನಭಾವಿ ನಿರೂಪಿಸಿದರು ಹಾಗೂ ಯಮನಪ್ಪ ಜಾಲಗಾರ ವಂದಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');