ನಿರುದ್ಯೋಗಿ ಯುವಕರಿಗೆ ಮಿನಿ ಟ್ರಕ್ ವಿತರಸಿದ ಡಿಸಿಎಮ್ ಸವದಿ

0
🌐 Belgaum News :

ನಿರುದ್ಯೋಗಿ ಯುವಕರಿಗೆ ಮಿನಿ ಟ್ರಕ್ ವಿತರಸಿದ ಡಿಸಿಎಮ್ ಸವದ

ಅಥಣಿ: ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಸರ್ಕಾರದ ಗುರಿಯಾಗಿದ್ದು ನಿರುದ್ಯೋಗಿ  ಯುವಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ವಿಶೇಷ ಅನುದಾನದಲ್ಲಿ ಸುಮಾರು 25 ಮಿನಿ ಟ್ರಕ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು .

 

ಅಥಣಿ ಪಟ್ಟಣದ ತಮ್ಮ ನಿವಾಸದ ಎದುರು ಇಂದು ಮುಂಜಾನೆ  ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ವಾಲ್ಮೀಕಿ ನಿಗಮದಿಂದ ಮಂಜೂರಾದ 8.ಲಕ್ಷ 70 ಸಾವಿರ ರೂ ಮೌಲ್ಯದ ಸುಮಾರು 25 ಮಿನಿ ಟ್ರಕ್ ಗಳಲ್ಲಿ ಎರಡನೇ ಹಂತವಾಗಿ  6 ಮಿನಿ ಟ್ರಕ್ ಗಳನ್ನು  ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ ಸವದಿಯವರು ಯಾರು ಲೈಸೆನ್ಸ್ ಹೊಂದಿ ಚಾಲನೆ ಮಾಡುವ ಆಸಕ್ತಿ ಹೊಂದಿರುತ್ತಾರೊ ಅಂತವರಿಗೆ ಅನೂಕೂಲವಾಗಲಿಯೆಂದು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದರಿಂದ ಆ ವ್ಯಕ್ತಿ ಜೊತೆಗೆ ಕುಟುಂಬ ಆರ್ಥಿಕವಾಗಿ ಸಬಲವಾಗುತ್ತದೆ. ಇದರಿಂದ ಸಂಕಷ್ಟದಲ್ಲಿ ಇರುವ ಕುಟುಂಬಗಳಿಗೆ ಸಾಮಾಜಿಕವಾಗಿ ಸ್ವಾವಲಂಬನೆಯ ಜೀವನ ನಡೆಸುವ ಮೂಲಕ ತಲೆ ಎತ್ತಿ ಬದುಕುವ ಅವಕಾಶ ಸಿಗುತ್ತದೆ. ಆರ್ಥಿಕ ಸಬಲವಲ್ಲದ ನಿರುದ್ಯೋಗಿ ಯುವಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಯುವಕರನ್ನು ಸ್ವ ಉದ್ಯೋಗದತ್ತ ಸೆಳೆಯುವ  ಉದ್ದೇಶದಿಂದ ಪರಿಶಿಷ್ಟ ಪಂಗಡ ಇಲಾಖೆಯಿಂದ ವಿಶೇಷ ಅನುದಾನದಿಂದ ಮಿನಿ ಟ್ರಕ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

 

ಈ ವಾಹನಗಳನ್ನು ಕೊಡುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಯುವಕರ ಕುಟುಂಬಗಳ ಏಳಿಗೆಯಾಗಲಿ ವಾಹನ ಪಡೆದ ನಿರುದ್ಯೋಗಿ ಯುವಕರು ಚಾಲನಾ ನಿಯಮಗಳನ್ನು ಪಾಲಿಸುವದರ ಜೊತೆಗೆ, ವಾಹನದ ದಾಖಲೆಗಳನ್ನು ಕಾಯ್ದುಕೊಂಡು,ಜೀವವಿಮೆ ಮಾಡಿಸುವ ಮೂಲಕ ಉತ್ತಮ ನಾಗರೀಕರಾಗಿ ಬದುಕುವಂತಾಗಲಿ ಎಂದು ಹಾರೈಸಿದರು.
ಈ  ವೇಳೆ ಮಾತನಾಡಿದ ಹೈಟೆಕ್ ಮೊಟರ್ಸನ ವಿನಯ ಬಾಳಿಕಾಯಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೆಜ ಹಾಗೂ ಭಾರ ಹೊರುವ ಈ ವಾಹನ ಉದ್ಯೋಗ ನಿರ್ವಹಿಸುವ ಯುವಕರಿಗೆ ಉತ್ತಮ ಆದಾಯ ನೀಡುತ್ತದೆ. ಪಿಕಪ್ ಮತ್ತು ಮೈಲೆಜ್ ದೃಷ್ಟಿಯಿಂದ ವಾಹನ ದುಡಿಯುವ ವರ್ಗದ ಜನಪರ ವಾಹನ ಎನ್ನಿಸಿಕೊಂಡಿದ್ದು ಯುವಕರು ಉತ್ತಮ ದುಡಿಮೆ ಮೂಲಕ ಆರ್ಥಿಕ ಸಬಲರಾಗಬೇಕು ಎಂದು ಕೋರಿದರು.

 

 

ಈ ಸಂದರ್ಭದಲ್ಲಿ ಜೇಡಪ್ಪಾ ಕುಂಬಾರ, ಶ್ರೀಶೈಲ್ ದುಲಾರಿ, ಬಾಬು ಹುಲ್ಯಾಳ, ಶ್ರೀಶೈಲ್ ಗಸ್ತಿ, ಮಹಾದೇವ ಬಿಸಲನಾಯ್ಕ್ ,ಇಲಾಖೆಯ ಮ್ಯಾನೇಜರ ಮಹೇಶ ನಾವಿ, ಹೈಟೆಕ್ ಮೊಟರ್ಸನ  ವಿನಯ ಬಾಳಿಕಾಯಿ, ಬಸವರಾಜ ತಂಗಡಿ, ಸಂಜಯ ಸೇರಿದಂತೆ ಸಮುದಾಯದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');