ಎಲ್ಲರಿಗೂ ಕುಟುಂಬ ಯೋಜನೆಯ ಮನವರಿಕೆ ಅಗತ್ಯ: ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಮ್.ವ್ಹಿ.ಕಿವಡಸಣ್ಣವರ

0
🌐 Belgaum News :

ವಿಶ್ವ ಜನಸಂಖ್ಯೆ ದಿನಾಚರಣೆ

ಬೆಳಗಾವಿ, ಜು.11  : ವಿಶ್ವ ಜನಸಂಖ್ಯೆ ದಿನಾಚರಣೆ ಪ್ರಯುಕ್ತ ಭಾನುವಾರ(ಜುಲೈ 11) ವಂಟಮುರಿ (ನಗರ)ಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಕೋವಿಡ್ 19 ನಿಯಮಾಳಿಗಳ ಪ್ರಕಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಮ್. ವ್ಹಿ. ಕಿವಡಸಣ್ಣವರ ಮಾತನಾಡಿ, ಕೋವಿಡ್ 19 ರ ಅವಧಿಯಲ್ಲಿ ವಿಪತ್ತಿನಲ್ಲಿಯೂ ಕುಟುಂಬ ಯೋಜನೆಯ ಸೇವೆ ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎನ್ನುವ ಈ ವರ್ಷದ ಘೋಷಣೆ ಬಗ್ಗೆ ತಿಳಿಸಿದರು .
ಸಮಾಜದಲ್ಲಿ ಎಲ್ಲರಿಗೂ ಕುಟುಂಬ ಯೋಜನೆ ಬಗ್ಗೆ ಮನವರಿಕೆ ಆಗಬೇಕು.ಕುಟುಂಬ ಯೋಜನೆಯ ಸೇವೆ ನಿರಂತರ. ಸೇವೆ ನಮ್ಮದು ಆಯ್ಕೆ ಫಲಾನುಭವಿಗಳದ್ದು. ಫಲಾನುಭವಿಗಳಿಗೆ ಹೊಸದಾಗಿ ಬಂದ ಮಹಿಳಾ ತಾತ್ಕಾಲಿಕವಾದ ವಿಧಾನ ಅಂತರ ಇಂಜೆಕ್ಷನ್ ಮತ್ತು ಛಾಯಾ ಮಾತ್ರೆ ಬಗ್ಗೆ  ತಿಳಿಸಿದರು.
ಪುರುಷ ಫಲಾನುಭವಿಗಳಿಗೆ ಹೊಲಿಗೆ ಮತ್ತು ಗಾಯ ಇಲ್ಲದ, ಯಾವುದೇ ರೀತಿ ತೊಂದರೆ ಆಗದ ಶಾಶ್ವತ ವಿಧಾನ ನೊಸ್ಕಾಲಪೆಲ್ ವ್ಯಾಸಕ್ಟಮಿ ಬಗ್ಗೆ ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕುಟುಂಬ ಕಲ್ಯಾಣ ಯೋಜನೆಗಳ ತಾತ್ಕಾಲಿಕ ಮತ್ತು ಶಾಶ್ವತ ವಿಧಾಗಳು ಹಾಗೂ ಸೇವೆಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಟಮುರಿಯ ತಾಯಿ
ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ
ಡಾ. ಸಂಜಯ ದೊಡಮನಿ ವಹಿಸಿದ್ದರು. ವೈದ್ಯಾಧಿಕಾರಿ
ಡಾ.ಜಯಾನಂದ ಧನವಂತ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ
ಬಸವರಾಜ ಯಲಿಗಾರ, ಫಾರ್ಮಸಿ ಅಧಿಕಾರಿ ಜಗದೀಶ್ ಪಾಟೀಲ್, ಶುಶ್ರೂಷಣಾಧಿಕಾರಿ ನರಗುಂದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');