ಕಾಗವಾಡದಲ್ಲಿ ನೂತನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಲೋಕಾರ್ಪಣೆ

0
🌐 Belgaum News :

ಕಾಗವಾಡದಲ್ಲಿ ನೂತನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಲೋಕಾರ್ಪಣೆ

ಕಾಗವಾಡ: ಎಪಿಎಂಸಿ ಆವರಣದಲ್ಲಿ ನೂತನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು
ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ಕಾಗವಾಡದಲ್ಲಿ ಸ್ವತಂತ್ರ್ಯ ನ್ಯಾಯಾಲಯ ಪ್ರಾರಂಭಿಸುವ ಕನಸು ಇಂದು ನನಸಾಗಿದ್ದು ರಾಜ್ಯದ ನ್ಯಾಯಮೂರ್ತಿಗಳಾದ ಅರವಿಂದಕುಮಾರ ಹಾಗೂ ಸಚೀನ ಮಗದುಮ ಇವರು ನ್ಯಾಯಾಲಯವನ್ನು ಉದ್ಘಾಟಿಸಿದರು.ರವಿವಾರ ಕಾಗವಾಡದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಇವರ ಮುಖ್ಯ ಉಪಸ್ಥಿತಿಯಲ್ಲಿ ನ್ಯಾಯಾಲಯ ಉದ್ಘಾಟಿಸಿ ಚಾಲನೆ ನೀಡಲಾಯಿತು.
ನ್ಯಾಯಮೂರ್ತಿಗಳಾದ ಅರವಿಂದಕುಮಾರ ನ್ಯಾಯಾಲಯ ಉದ್ಘಾಟಿಸಿದ ಬಳಿಕ ಮಾತನಾಡಿ ಕಾಗವಾಡದಲ್ಲಿ ನ್ಯಾಯಾಲಯ ಪ್ರಾರಂಭಿಸಲು 2017ರಿಂದ ನಾನು ಪ್ರಯತ್ನಿಸುತ್ತಿದ್ದೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಇದನ್ನು ಪ್ರಾರಂಭಿಸಲು ಅಥಣಿ ಶಾಸಕರು ಹಾಗೂ ರಾಜ್ಯದ ಡಿಸಿಎಂ ಲಕ್ಷ್ಮಣ ಸವದಿ, ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರ ವಿಶೇಷ ಪ್ರಯತ್ನವಿದೆ. ನ್ಯಾಯವಾದಿಗಳು ಈ ಮೊದಲು ತಮ್ಮ ಕಕ್ಷಿಗಾರರನ್ನು ತೆಗೆದುಕೊಂಡು ಅಥಣಿಗೆ ಹೋಗಬೇಕಾಗಿತ್ತು.

 

ನಂತರ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ ನ್ಯಾಯಮೂರ್ತಿಗಳಾದ ಅರವಿಂದಕುಮಾರ ಇವರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಆಡಳಿತಾತ್ಮಕ ಸೇವೆ ನೀಡಿದ್ದು, ಒಳ್ಳೆ ನ್ಯಾಯಾಧೀಶರೆಂದು ಹೇಳಿ ಅವರ ಕಾರ್ಯಕಲಾಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಅಥಣಿ ನ್ಯಾಯವಾದಿಗಳ ಬೇಡಿಕೆಯಂತೆ ಅಥಣಿಯಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸಬೇಕೆಂದು ಬೇಡಿಕೆಯಿಟ್ಟರು
ಈ ವೇಳೆ ಅಥಣಿ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಪ್ಪ ಹೊನ್ನೂರ, ಚನ್ನಬಸಪ್ಪ ಕೂಡಿ ಕಾಗವಾಡ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಮ್ ಪಾಟೀಲ್, ಉಪಾಧ್ಯಕ್ಷ ಎ.ಬಿ.ಭಂಡಾರೆ,ಕಾರ್ಯದರ್ಶಿ ಸಿ.ಎಸ್.ಮಠಪತಿ,ಹಿರಿಯ ವಕೀಲರು ಎ.ಪಿ.ಅಕಿವಾಟೆ,ಎಸ್.ಡಿ.ನರವಾಡೆ,ವಾಯ್ ಬಿ ಯಡೂರೆ,ಎ.ಸಿ.ಪಾಟೀಲ್, ಎಸ್.ಆರ್.ನಿಂಬಾಳ್ಕರ್ ಪಿ.ಎಸ್.ಕನಾಳ,ಎಸ್.ಎಸ್.ದೊಂಡಾರೆ,ಅಮೀತ ದಿಕ್ಷಾಂತ,ಶಿವಾಜಿ ಕಾಂಬ್ಳೆ, ಪೋಪಟ ಕಾಂಬ್ಳೆ,ಸುಧೀರ ದೊಂಡಾರೆ,ಮಂಜು ಹೊನಕಾಂಬ್ಳೆ,ಬವವರಾಜ ಕಾಂಬ್ಳೆ,ಉಮೇಶ ನಿಡೀಣಿ,ಸಂತೋಷ ಉದಗಾಂವೆ,ಬಾಳಾಸಾಬ ರಾವ್,ತಹಶಿಲ್ದಾರ ಪ್ರಮಿಳಾ ದೇಶಪಾಂಡೆ, ಸಿಪಿಐ ಶಂಕರಗೌಡ ಬಸಗೌಡರ,ಪಿಎಸ್ಐ ಜಾಹೀರ್ ಮೋಕಾಶಿ ಹಾಗೂ ಕಾಗವಾಡ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');