ನಾಳೆ ಬಕ್ರೀದ್ ಹಬ್ಬ: ಮಾರ್ಗಸೂಚಿ ಅನುಸರಿಸಿ ಹಬ್ಬದ ಆಚರಣೆಗೆ ಡಿಸಿ ಆದೇಶ

0

ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ (ಬೆಳಗಾವಿ ತಾಲೂಕು ಹೊರತುಪಡಿಸಿ) ಬಕ್ರೀದ್ ಹಬ್ಬವನ್ನು ಆಚರಿಸಲಿರುವ ಪ್ರಯುಕ್ತ ಜು.21 ರ ಬೆಳಿಗ್ಗೆ 06 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲ ಮದ್ಯದ ಅಂಗಡಿ ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಮ.ಜಿ.ಹಿರೇಮಠ ಅವರು ಸೂಚಿಸಿರುತ್ತಾರೆ.

ಸಾರ್ವಜನಿಕ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಮಾಲೀಕರು ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.

ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಆಯುಕ್ತರು, ಬೆಳಗಾವಿ/ಚಿಕ್ಕೋಡಿ ಅಬಕಾರಿ ಉಪ ಅಧಿಕ್ಷಕರು ಸದರಿ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು.
ಈ ಸೂಚನೆಯನ್ನು ಉಲ್ಲಂಘಿಸಿದ್ದಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32 ರನ್ವಯ ಶಿಕ್ಷಗೆ ಒಳಪಡುವರು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಅವರು ಎಚ್ಚರಿಕೆ ನೀಡಿದ್ದಾರೆ.

ಮಾರ್ಗಸೂಚಿ ಅನುಸರಿಸಿ ಬಕ್ರೀದ್ ಹಬ್ಬ ಆಚರಿಸಿ:
ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ರಾಜ್ಯದ್ಯಂತ 2021 ಬಕ್ರೀದ್ ಹಬ್ಬ ಆಚರಣೆ ಮಾಡಲು ಮಾನ್ಯ ರಾಜ್ಯ ಸರ್ಕಾರವು ಈಗಾಗಲೇ ಮಾರ್ಗಸೂಚಿಯನ್ನು ಹೊಡಿಸಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ದರ್ಗಾಗಳಲ್ಲಿ ನಮಾಜನ್ನು ನಿರ್ಬಂಧಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ವಹಿಸಲು ಇಚ್ಚಿಸಿದಲ್ಲಿ ಮಾರ್ಗಸೂಚಿ ಅನ್ವಯ ಆಯಾ ಮಸೀದಿ ಸಾಮಥ್ರ್ಯಕ್ಕೆ ಅನುಗುಣವಾಗಿ ಅನುಗುಣವಾಗಿ ಶೆ. 50% ರಷ್ಟು ಜನರು ಮೀರದಂತೆ ಒಂದು ವೇಳೆ ಅಧಿಕ ಜನಸಂಖ್ಯೆ ಆಗಮಿಸಿ ದ್ದಲ್ಲಿ ಪಂತಿಗಳಲ್ಲಿ ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಾರ್ಥನೆಯನ್ನು ನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿ ಎಂ ಜಿ. ಹಿರೇಮಠ್ ತಿಳಿಸಿದ್ದಾರೆ.

ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಅನುಸರಿಸಿ ಕ್ರಮ ವಹಿಸಲು ಸೂಚಿಸಲಾಗಿದೆ:
ಪ್ರಾರ್ಥನಾ ಸ್ಥಳದಲ್ಲಿ ಮಾಸ್ ಕಡ್ಡಾಯ ವಾಗಿ ಧರಿಸಬೇಕು  65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆಯನ್ನು ಮಾಡಬೇಕು
ನಮಾಜ್ ನಿರ್ವಹಿಸುವ ಮಧ್ಯ ಕನಿಷ್ಠ ಆರೋಗ್ಯವನ್ನು ಕಾಯ್ದುಕೊಳ್ಳಬೇಕು
ಔಷಧಿಗಳನ್ನು ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡುವುದು  ಕೈಗಳನ್ನು ಸುಪುತ್ರ ಸಾಹಿತ್ಯದ ನಿಂದ ಶುಚಿಗೊಳಿಸುವುದು  ಹಸ್ತಲಾಘವವನ್ನು ಹಾಗೂ ಆಲಿಂಗನ ವನ್ನು ಮಾಡದಿರಲು ಸೂಚಿಸಲಾಗಿದೆ

ಪ್ರಾಣಿವಧೆ ಮತ್ತು ಬಲಿದಾನ ಮಾಡುವುದು ಈ ಸ್ಥಳಗಳಲ್ಲಿ ನಿಷೇದ
ರಸ್ತೆಗಳು ಪಾದಚಾರಿ ಮಾರ್ಗಗಳಲ್ಲಿ ಹಾಗೂ ಎಲ್ಲ ರೀತಿಯ ಆಸ್ಪತ್ರೆ ಆವರಣಗಳು ನರ್ಸಿಂಗ್ ಹೋಮ್ ಒಳ ಹಾಗೂ ಹೊರ ಆವರಣಗಳು ಶಾಲಾ-ಕಾಲೇಜುಗಳು ನಡೆಯುತ್ತಿದ್ದ ಶಾಲಾ-ಕಾಲೇಜುಗಳಲ್ಲಿ ಹಾಗೂ ಇತರೆ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಆದೇಶ ಹೊರಡಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');