ತಾಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ ಬೀಳ್ಕೊಡುಗೆ

0
ಬೆಳಗಾವಿ  : ಅಥಣಿ: ಬೆಳಗಾವಿ ಜಿಲ್ಲಾ ಪಂಚಾಯತ ಯೋಜನಾ ಅಧಿಕಾರಿ ಆಗಿ ಪದೊನ್ನತಿ ಹೊಂದಿದ ರವಿ ಬಂಗಾರಪ್ಪನವರ ಅವರ ಬೀಳ್ಕೊಡುಗೆ ಮತ್ತು ತಾಲೂಕು ಪಂಚಾಯತ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಶೇಖರ ಕರಬಸಪ್ಪಗೋಳ ಅವರ ಸ್ವಾಗತ ಕಾರ್ಯಕ್ರಮ ಅಥಣಿ ಪಟ್ಟಣದ ತಹಶಿಲ್ದಾರ ಕಚೇರಿಯ ಸಭಾ ಭವನದಲ್ಲಿ ಜರುಗಿತು.
ಈ ವೇಳೆ ಮಾತನಾಡಿದ ರವಿ ಬಂಗಾರಪ್ಪನವರ ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರವನ್ನು ನೆನಪಿಸಿಕೊಂಡು ಮಾತನಾಡಿ ಅಥಣಿ ತಾಲೂಕಿನಲ್ಲಿ ಎರಡು ಬಾರಿ ಪ್ರವಾಹ ಮತ್ತು ಎರಡು ಬಾರಿ ಕೊರೊನಾ ಸಂಕಷ್ಟದ ಸಮಯದಲ್ಲಿ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ, ಪುರಸಭೆ ಹಾಗೂ ಪತ್ರಕರ್ತರ ಸಹಕಾರ ದೊಡ್ಡದು ಕೊವಿಡ್ ಸಮಯದಲ್ಲಿ ತಂದೆಯವರನ್ನು ಕಳೆದುಕೊಂಡ ಸ್ಥಿತಿ ನನ್ನದಾದರೆ
 ಹಲವು ಸಹೋದ್ಯೋಗಿ, ಮತ್ತು ಸಭಂಧಿಕರನ್ನು ಕಳೆದುಕೊಂಡಿದ್ದೇವೆ ಆದರೆ ಕರ್ತವ್ಯ ನೀರ್ವಹಣೆಯ ಸಮಯದಲ್ಲಿ ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಇರುತ್ತದೆ. ನಾವು ಪ್ರಾಮಾಣಿಕವಾಗಿ ಇದ್ದಷ್ಟು ಸಮಸ್ಯೆಗಳು ಸರಳವಾಗುತ್ತ ಹೋಗುತ್ತವೆ. ಕರ್ತವ್ಯ ನೀರ್ವಹಣೆಯ ಸಮಯದಲ್ಲಿ ತಾಲೂಕಿನ ಜನರ ಸಹಕಾರ ದೊಡ್ಡದು ನನಗೆ ಸಹಕಾರ ಕೊಟ್ಟ ರೀತಿಯಲ್ಲಿ ಮುಂದೆ ಬರುವ ಅಧಿಕಾರಿಗಳ ಜೊತೆಗೆ ಎಂದಿನಂತೆ ಸಹಕಾರ ಇರಲಿ ಎಂದರು.ಈ ವೇಳೆ ಮಾತನಾಡಿದ ತಹಶಿಲ್ದಾರ ದುಂಡಪ್ಪ ಕೋಮಾರ ಕೂಡುವದು ಆಕಸ್ಮಿಕ ಅಗಲುವದು ಅನಿವಾರ್ಯ ಆದರೆ ನೆನಪುಗಳು ಶಾಸ್ವತ. ಅಧಿಕಾರದಲ್ಲಿ ಪದೊನ್ನತಿ ಹೊಂದುವದು,
ಮತ್ತು ನಿವೃತ್ತಿ ಹೊಂದುವದು ಸಹಜ ಅನ್ನಿಸಿದರು ಕೂಡ ವ್ಯಕ್ತಿಯ ವೃತ್ತಿಜೀವನದ ಸವಿನೆನಪುಗಳು ಎಂದರು. ಹೊರಗಿನ ಜಿಲ್ಲೆಗಳಿಂದ ಬಂದ ಅಧಿಕಾರಿಗಳಿಗೆ ಸ್ಥಳಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಹಾಗೂ ಜನರು ಸಹಕರಿಸಿದಾಗ ಮಾತ್ರ ಅಧಿಕಾರಿಗಳು ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯ ಮುಂದಿನ ವೃತ್ತಿ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇವೆ ಎಂದರು.
ಈ ವೇಳೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ, ತಾಪಂ ಅಧಿಕಾರಿ ಶೇಖರ ಕರಬಸಪ್ಪಗೋಳ, ಪಿಎಸ್ಐ ಕುಮಾರ ಹಾಡಕಾರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣ ಪಾಟೀಲ, ಉಪತಹಶಿಲ್ದಾರ ಮಹಾದೇವ ಬಿರಾದಾರ, ಮತ್ತು ಅಮೀತ ಡವಳೇಶ್ವರ, ಎಮ್ ಎಮ್ ಮಿರ್ಜಿ, ಹಾಗೂ ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');