ಸಿಎಂ ಆಗಿ ಮುಂದುವರಿಯುವಂತೆ ಬಿ.ಎಸ್‌.ಯಡಿಯೂರಪ್ಪರಿಗೆ ಮಠಾಧೀಶರಿಂದ ಮನವಿ

0

ಬೆಂಗಳೂರು: ವೀರಶೈವ–ಲಿಂಗಾಯತ ಮಠಾಧೀಶರ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿಯಾಗಿ,   ಮುಖ್ಯಮಂತ್ರಿಯಾಗಿ ಮುಂದುವರಿಯಲು ಮನವಿ ಮಾಡಿದ್ದಾರೆ.

ಅಗತ್ಯವಿದ್ದರೆ ನಿಮ್ಮ ಪರವಾಗಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಅವರಿಗೂ ಮನವಿ ಸಲ್ಲಿಸಲು ಸಿದ್ಧರಿರುವುದಾಗಿ ಹೇಳಿದರು. ನಿಯೋಗದಲ್ಲಿ 20ಕ್ಕೂ ಹೆಚ್ಚು ಮಠಾಧೀಶರಿದ್ದರು. ಸುಮಾರು ಅರ್ಧ ಗಂಟೆ ಅವರು ಯಡಿಯೂರಪ್ಪ ಜತೆ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

 

ಬಳಿಕ ಮಾದ್ಯಮದರೊಂದಿಗೆ ಬಾಳೆಹೊಸುರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ,  ಸಿಎಂ ಯಡಿಯೂರಪ್ಪನವರು ಲಿಂಗಾಯತ ನಾಯಕರ ಅಷ್ಟೇ ಅಲ್ಲ, ಅವರೊಬ್ಬ ಅಗ್ರಗಣ್ಯ ನಾಯಕರು.  ಉಳಿದ ಅವಧಿಯನ್ನು ಸಿಎಂ ಅವರು ಮುಂದುವರೆಸಲಿ ಎನ್ನುವುದು ನಮ್ಮ ಮನವಿ.  ಸಿಎಂ ಯಡಿಯೂರಪ್ಪನವರನ್ನು ಕೆಳಗಿಸದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ವನಾಶವಾಗುವುದು ನಿಶ್ಚಿತ ಎಂದು ವಿರೋಧಿ ಬಣಕ್ಕೆ ಎಚ್ಚರಿಕೆ ನೀಡಿದ್ದಾರೆ.

2-3 ದಿನಗಳಲ್ಲಿ 500 ಅಧಿಕ ಮಠಾಧೀಶರು ಸೇರಿ , ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಈ ಕುರಿತು ಕೇಂದ್ರದ ಒತ್ತಡ ತರಲಾಗುವುದು. ಸಿಎಂ ಸ್ಥಾನದ ಬಗ್ಗೆ ಮಠಾಧೀಶರು ನಿರ್ಣಯಿಸುತ್ತೆವೆ.  ಸಭೆಯಲ್ಲಿ ಯಡಿಯೂರಪ್ಪನವರು  ನಮ್ಮ ಬಳಿ ಯಾವುದೇ ಹೇಳಿಕೆ ನೀಡಿಲ್ಲ, ಹೈಕಮಾಂಡ್ ನಿರ್ಧಾರ ನಾನು ಬದ್ಧ ಎಂದು ಮಾಹಿತಿ ತಿಳಿಸಿದ್ದಾರೆ ಅಷ್ಟೆ, ನಮ್ಮ ಜತೆ ಮಾತನಾಡುವಾಗ ತುಂಬಾ ಖುಷಿಯಲ್ಲಿದ್ರು ಎಂದರು.

ಕೆಟ್ಟ ಉದ್ದೇಶದಿಂದ ಯಡಿಯೂರಪ್ಪನವರನ್ನು  ಸಿಎಂ ಸ್ಥಾನದಿಂದ ಕೆಳಗಿಸುವ ಯತ್ನ ನಡೆದಿದೆ,  ಒಂದು ವೇಳೆ ಯಡಿಯೂರಪ್ಪರನ್ನು  ಸಿಎಂ ಸ್ಥಾನ ಕೆಳಗಿಸಿದರೆ, ರಾಜ್ಯದಲ್ಲಿ ಬಿಜೆಪಿ ಉಳಿಗಾಲವಿಲ್ಲ ಎಂದು ಅಸಮಾಧಾನ ಹಾಕಿದರು.  ಮೇಲೆ ಕಾಣದ ಕೈಗಳ  ಕೈವಾಡವಿದೆ.  ಯಡಿಯೂರಪ್ಪನವರು ಸಿಎಂ ಆಗಿ ಮುಂದುವರೆದರೆ ಮಾತ್ರ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯ. ಕಳೆದ  ಎರಡು ವರ್ಷಗಳಿಂದ ಸಿಎಂ ಒಳ್ಳೆಯ ಆಡಳಿತ ಮಾಡಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');