ಕುಂದಾ ನಗರದಲ್ಲಿ ಬಕ್ರೀದ್‌ ಸರಳ ಆಚರಣೆ

0

ಬೆಳಗಾವಿ: ಬಡವ-ಶ್ರೀಮಂತ, ಮೇಲು-ಕೀಳು ಎಂಬ ಅಂತರವನ್ನು ಅಳಿಸಿ, ವಿಶ್ವಭ್ರಾತೃತ್ವದ ಕಲ್ಪನೆ ಮೂಡಿಸುವ ಬಕ್ರೀದ್‌ ಹಬ್ಬವನ್ನು ಕುಂದಾನಗರ ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಇಲ್ಲಿನ ದರ್ಬಾರ್ ಗಲ್ಲಿ ಸೇರಿದಂತೆ ವಿವಿದ ಮಸೀದಿಗಳಲ್ಲಿ ಪ್ರೀತಿ ಮತ್ತು ತ್ಯಾಗದ ಸಂಕೇತವಾದ  ಬಕ್ರೀದ್ ಹಬ್ಬವನ್ನುಮುಸ್ಲಿಂ ಬಾಂಧವರು ಸರಳವಾಗಿ   ಪ್ರಾರ್ಥನೆ ಸಲ್ಲಿಸುವ ಮುಖಾಂತರ ಆಚರಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ   ಮುಸ್ಲಿಂ ಬಾಂಧವರು ಸಾಮಾಜಿಕ ಜಾಲತಾಣಗಳ ಮೂಲಕ ಬಕ್ರೀದ್ ಹಬ್ಬದ  ಶುಭಾಶಯ ಕೋರಿದ್ದಾರೆ.

ಮಸೀದಿಗಳಲ್ಲಿ ಶೇ 50ರಷ್ಟು ಮಂದಿ ಕೋವಿಡ್‌ ಮಾರ್ಗಸೂಚಿ ಪಾಲಿಸಿ, ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳು ಹೊಸಬಟ್ಟೆ ಧರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮನೆಗಳಲ್ಲಿ ಮಹಿಳೆಯರು ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ಸುರ್‌ಕುಂಬಾ (ಶ್ಯಾವಿಗೆ ಪಾಯಸ) ಮುಂತಾದ ಖಾದ್ಯಗಳನ್ನು ತಯಾರಿಸುತ್ತಿದ್ದ ದೃಶ್ಯ ಕಂಡು ಬಂದಿತು. ಅಕ್ಕಪಕ್ಕದ ಜನರಿಗೂ ಹಂಚಿ, ಮಧ್ಯಾಹ್ನ ಎಲ್ಲ ಬಾಂಧವರು ಒಟ್ಟಿಗೆ ಸೇರಿ ಊಟ ಮಾಡುತ್ತೇವೆ ಎಂದು ನಾಗೇಂದ್ರನಮಟ್ಟಿಯ ನಿವಾಸಿಗಳು ಹೇಳಿದರು.

ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಅಂಗವಾಗಿ ಕುರಿ, ಮೇಕೆಗಳನ್ನು ‘ಖುರ್ಬಾನಿ’ (ಬಲಿದಾನ) ಕೊಟ್ಟರು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಈದ್ಗಾ ಮತ್ತು ಮಸೀದಿಗಳ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');