ಪೋಷಕರ ವಿರೋಧದ ನಡುವೆ ಪ್ರಿಯಕರನ ಕೈ ಹಿಡಿದ ಯುವತಿ ದುರಂತ ಅಂತ್ಯ..!

0

ಬಾಗಲಕೋಟೆ: ಪೋಷಕರ ವಿರೋಧದ ನಡುವೆ,  ಪ್ರಿಯಕರನ ಕೈ ಹಿಡಿದ ಯುವತಿ ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ, ಮಗಳ ಸಾವಿನ ಸುದ್ಧಿ ಸಹಿಸಲಾಗದೇ ಪೋಷಕರು  ಪ್ರಿಯಕರನ ಮನೆಗೆ ಬೆಂಕಿ ಇಟ್ಟಿದ್ದಾರೆ.

ಇಂತಹ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೆಲೂರಿನಲ್ಲಿ ಸಂಭವಿಸಿದ್ದು, ನೂರಾರು ಜನರ ಕಣ್ಣೆದುರಲ್ಲೇ ಮನೆ ಹೊತ್ತಿ ಉರಿದಿದೆ.   ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಯುವತಿ ಬಸಮ್ಮ ಮಾದರ ಮತ್ತು ರಂಜಿತ್ ಕೊಂಚನವರ ಪರಸ್ಪರ ಪ್ರೀತಿಸುತ್ತಿದ್ದರು. ಆದರೂ,  ಯುವತಿಯ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು.

ಗಂಡನಿಗೆ ಬಸಮ್ಮಳ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿ ಜಗಳ ನಡೆದು ಇಬ್ಬರ ವೈವಾಹಿಕ ಜೀವನ ಮುರಿದುಬಿದ್ದಿತ್ತು. ಕೊನೆಗೆ ಪ್ರಿಯಕರ ರಂಜಿತ್​ ಜತೆ ಬಸಮ್ಮ ಸಹಬಾಳ್ವೆ ನಡೆಸುತ್ತಿದ್ದಳು. ಆದರೆ, ರಂಜಿತ್​ ಮತ್ತು ಬಸಮ್ಮರದ್ದು ಅಂತರ್ಜಾತಿ. ಹಾಗಾಗಿ ರಂಜಿತ್​ ಕುಟುಂಬಸ್ಥರ ಜತೆ ಇರದೆ ಪ್ರತ್ಯೇಕವಾಗಿ ಪ್ರೇಯಸಿ ಜತೆ ವಾಸವಿದ್ದ. ಶುಕ್ರವಾರ ಬೆಳಗ್ಗೆ ಬಸಮ್ಮಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,   ಮಗಳ ಸಾವಿಗೆ ರಂಜಿತ್​ ಮತ್ತು ಅವನ ಕುಟುಂಬಸ್ಥರೇ ಕಾರಣ ಎಂದು ರೊಚ್ಚಿಗೆದ್ದ ಕುಟುಂಬಸ್ಥರು ರಂಜಿತ್​ ಮನೆಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಬಂದ ಹುನಗುಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲೂರ ಗ್ರಾಮದಲ್ಲಿ ಯುವತಿ ನೇಣುಹಾಕಿಕೊಂಡಿದ್ದ ಮನೆ ಹಾಗೂ ಬೆಂಕಿ ಹಚ್ಚಿದ್ದ ಮನೆಗೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಗ್ರಾಮದಲ್ಲಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');