ಜೇನು ಗೂಡಿಗೆ ಕಲ್ಲು ಹೊಡೆದರೆ ಏನಾಗಲಿದೆಯಂದು ಅರಿಯಬೇಕು : ರಂಭಾಪುರಿ ಶ್ರೀ

0

ಬೆಳಗಾವಿ : ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರದ ಬಗ್ಗೆ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ರಂಭಾಪುರಿ ಶ್ರೀ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲು ಬಿ.ಎಸ್.ಯಡಿಯೂರಪ್ಪ ಕಾರಣರಾಗಿದ್ದರು. ಅವರನ್ನು ಕೆಳಗೆ ಇಳಿಸಿದ್ದೇ ಆದ್ರೆ ಬಿಜೆಪಿ ಪಕ್ಷಕ್ಕೆ ಪೆಟ್ಟು ಬೀಳುತ್ತದೆ. ನಾಡಿನ ಮಠಾಧೀಶರು ಜಾತಿ ಮತ ಪಂಥ ಮರೆತು ಯಡಿಯೂರಪ್ಪ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ. ಇದು ನಮಗೆ ಅಷ್ಟೇ ಅಲ್ಲ ರಾಷ್ಟ್ರೀಯ ನಾಯಕರಿಗೂ ಗೊತ್ತಾಗುತ್ತದೆ.

ಈ ಸಂದರ್ಭದಲ್ಲಿ ಜಾಣ್ಮೆಯಿಂದ ನಡೆದುಕೊಳ್ಳಬೇಕು. ಜೇನು ಗೂಡಿಗೆ ಕಲ್ಲು ಹೊಡೆದರೆ ಏನು ಆಘಾತ ಆದೀತು ಎಂಬುದನ್ನು ಅರಿಯಬೇಕು. ಅಂತಹ ಆಘಾತ ಪಕ್ಷಕ್ಕೆ ಆಗದಿರಲಿ ಅಂತಾ ನಮ್ಮ ಅನಿಸಿಕೆ. ಅದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ತಮ್ಮ ಮನಸ್ಸು ಬದಲಾಯಿಸಿ, ಉಳಿದಿರುವ ಅವಧಿಗೆ ಮುಂದುವರಿಸಿದ್ರೆ ಎಲ್ಲರಿಗೂ ಸಮಾಧಾನ ಆಗುತ್ತದೆ ಅಂತ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');