ರೈತ ಹುತಾತ್ಮ ದಿನಾಚರಣೆ: ಕೃಷಿ ಉಳಿಸಿ-ಪ್ರಜಾಪ್ರಭುತ್ವ ರಕ್ಷಿಸಿ

0

ಚಿಕ್ಕಬಳ್ಳಾಪುರ :  ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ 41ನೇ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ನಗರದ ಡಿವಿಜಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಬಿ‌ ಬಿ ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಕೃಷಿ ಉಳಿಸಿ-ಪ್ರಜಾಪ್ರಭುತ್ವ ರಕ್ಷಿಸಿ ಎಂದು ಘೋಷಣೆ ಕೂಗಿ, ಹಸಿರು ಸೇನೆಯ ಸಂಘದ ರಾಜ್ಯಾದ್ಯಕ್ಷ ಜಿಜಿ ಹಳ್ಳಿ ನಾರಾಯಣಸ್ವಾಮಿ ಜಾಥಾಗೆ  ಬುಧವಾರ ಚಾಲನೆ ನೀಡಿದರು.

ರೈತರು ಈ ನಾಡಿನ ಬೆನ್ನೆಲುಬು ರೈತ 1ನಿಮಿಷ ಸುಮ್ಮನೆ ಕೂತರು ಕೋಟ್ಯಂತರ ಜನರು ಹಸಿವಿನಿಂದ ಬಳಲಿ ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂದರೆ ತಪ್ಪಾಗಲಾರದು ಈ ನಿಟ್ಟಿನಲ್ಲಿ ರೈತರು ಮಳೆ ಗಾಳಿ ಬಿಸಿಲು ಎನ್ನದೆ ಸದಾ ಹಸನ್ಮುಖಿಗಳಾಗಿ ದೇಶಕ್ಕೆ ಅನ್ನ ನೀಡುವ ಕಾರ್ಯದಲ್ಲಿ ನಿರತರಾಗಿರುತ್ತಾರೆ ಅಂತಹ ಅನ್ನ ನೀಡುವಂತಹ ಪ್ರಭುಗಳಿಗೆ ನಮ್ಮನ್ನಾಳುವ ಸರ್ಕಾರಗಳು ಕೈಗೊಂಬೆಯಂತೆ ನಡೆಸಿಕೊಳ್ಳುತ್ತಾರೆ ಎಂದು ದೂರಿದರು.

ಬಿತ್ತನೆ ಬೀಜ ರಸಗೊಬ್ಬರ ಮತ್ತು ಇತರೆ ರೈತ ವರ್ಗದ ಜನರಿಗೆ ಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಬಿತ್ತನೆ ಬೀಜ ಸೇರಿದಂತೆ ರೈತರಿಗೆ ಬೇಕಾಗಿರುವ ಸಾಮಗ್ರಿಗಳ ಬೆಲೆ ಗಗನಕ್ಕೇರಿರುವುದು ಖಂಡನೀಯ ಮತ್ತು ಸವಲತ್ತುಗಳನ್ನು ಕೇಳುವ ನಿಟ್ಟಿನಲ್ಲಿ ರೈತರು ಮುಂದಾದರು ಅವರ ಎದೆಗೆ ಗುಂಡಿಟ್ಟು ಕೊಲ್ಲುವ ಗೋಜಿಗೂ ಸರ್ಕಾರಗಳು ಹೋಗುತ್ತವೆ ಎಂದರೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಮಿತಿ ಪದಾಧಿಕಾರಿಗಳಾದ ಮಾಧವರೆಡ್ಡಿ, ಕಣಗಲ್ ಮೂರ್ತಿ, ನಾಗರತ್ನ, ಬಸವನಗೌಡ ಪಾಟೀಲ್, ಅರುಣ್ ಕುಮಾರ್, ನಿಂಗಣ್ಣ ದೀವಿಟಿಗಿ, ಅಳ್ಳಪ್ಪ, ಕಲ್ವಮಂಡಲಿ ರಾಮು, ಶಿವಣ್ಣ, ಕೃಷ್ಣ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಬಸವರಾಜು, ಜಿ.ವಿ ರಾಜಣ್ಣ, ಸತ್ಯನಾರಾಯಣ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');