ಮಠಾಧಿಪತಿಗಳೇ ದಯಮಾಡಿ ಸಿಎಂ ಬದಲಾವಣೆ ವಿಚಾರದಲ್ಲಿ ಕೈ ಹಾಕಬೇಡಿ‌; ವಾಟಾಳ್ ನಾಗರಾಜ್

0

ಮೈಸೂರು: ಕೇಂದ್ರದ ಮೇಲೆ ಯಡಿಯೂರಪ್ಪ ಬೆದರಿಕೆ ಹಾಕುತ್ತಿದ್ದಾರೆ. ಮಠಾಧಿಪತಿಗಳು ದಯಮಾಡಿ ಇದರಲ್ಲಿ ಕೈ ಹಾಕಬೇಡಿ‌ ಎಂದು ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ 6 ತಿಂಗಳೆ ಆಗಿದೆ. ಈಗಂತೂ ತುತ್ತ ತುದಿಗೆ ಬಂದಿದೆ. ಸಿಎಂ ಬದಲಾವಣೆ ಒಂದು ವರ್ಗ ಒತ್ತಾಯ ಮಾಡುತ್ತಿದೆ. ಇವರು ಸಿಎಂ ಆಗಿ ಉಳಿಬೇಕು ಅಂತ ಹೊರಾಟ ಮಾಡ್ತಾ ಇದ್ದಾನೆ. ಆದರೆ ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಆಡಳಿತ ಕುಸಿದಿರುವುದರಿಂದ ಯಡಿಯೂರಪ್ಪಗೆ ಅರ್ಹತೆ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಸಿಎಂ ಪರ ಮಠಾಧೀಶರ ಬ್ಯಾಟಿಂಗ್ ವಿಚಾರ ಕುರಿತಂತೆ ಮಾತನಾಡಿದಂತ ಅವರು, ಮಠಾಧೀಶರನ್ನ ದೇವರೇ ಕಾಪಾಡಬೇಕು. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ಮಠಗಳಿಗೆ ಐತಿಹಾಸಿಕ ಪರಂಪರೆ ಇದೆ. ಮಠಾಧಿಪತಿಗಳು ಯಾವತ್ತೂ ಬೀದಿಗೆ ಬಂದಿಲ್ಲ. ವೀರಶೈವ ತತ್ವ ಸಿದ್ದಾಂತ ಇಡೀ ಸಮಾಜಕ್ಕೆ ದಾರಿದೀಪ. ಮಠಗಳನ್ನು ಯಡಿಯೂರಪ್ಪ ಕತ್ತಲೆಯಲ್ಲಿ ಇಡುತ್ತಿದ್ದಾರೆ ಎಂದರು.

ಹಿಂದಿನ ಮುಖ್ಯಮಂತ್ರಿಗಳು ಯಾವತ್ತೂ ಮಠಗಳನ್ನು ಸೇರಿಸಿಕೊಳ್ಳಲಿಲ್ಲ. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ ಮಾಡಿದ್ದಾರೆ. ಕೇಂದ್ರದ ಮೇಲೆ ಯಡಿಯೂರಪ್ಪ ಬೆದರಿಕೆ ಹಾಕುತ್ತಿದ್ದಾರೆ. ಮಠಾಧಿಪತಿಗಳು ದಯಮಾಡಿ ಇದರಲ್ಲಿ ಕೈ ಹಾಕಬೇಡಿ‌. ಕೆಲ ಶ್ರೀಮಂತ ಮಠಗಳು ಮಾತ್ರ ಯಡಿಯೂರಪ್ಪ ಜೊತೆ ಬಂದಿದ್ದಾರೆ. ನಿಮ್ಮ ಶ್ರೀಮಂತ ಮಠಗಳ ಮೆಡಿಕಲ್ ಕಾಲೇಜಿನಲ್ಲಿ ಲಿಂಗಾಯತರಿಗೆ, ಬಡವರಿಗೆ ಉಚಿತ ಮೆಡಿಕಲ್ ಸೀಟ್ ಕೊಟ್ಟಿದ್ದೀರಾ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');