ದುಬೈನಿಂದ ಭಾರತಕ್ಕೆ ಚಿನ್ನದ ತಂದ ಆಸಾಮಿಗೆ “ಖಾಕಿ” ಕೊಳ

0

ಚೆನ್ನೈ:  ಗಲ್ಫ್ ದೇಶಗಳಿಂದ ಮರಳುತ್ತಿರುವ ಪ್ರಯಾಣಿಕರು ಚಿನ್ನದ ಕಳ್ಳಸಾಗಣೆ ಮಾಡಿ ಸಿಕ್ಕಿಹಾಕಿಕೊಳ್ಳುವುದು ಕಸ್ಟಮ್ಸ್​ ಅಧಿಕಾರಿಗಳಿಗೆ ಹೊಸ ವಿಷಯವೇನಲ್ಲ. ಆದರೆ ಇಲ್ಲೊಬ್ಬ ಭಾರೀ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ವಿಚಿತ್ರ ಮಾರ್ಗ ಅನುಸರಿಸಿದ್ದಾನೆ. ಚಿನ್ನದ ಪೇಸ್ಟ್​ನ ಬಂಡಲ್​ಗಳನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ದುಬೈನಿಂದ ಭಾರತಕ್ಕೆ ಪ್ರಯಾಣಿಸಿದ್ದಾನೆ..!

ಒಟ್ಟು 948 ಗ್ರಾಂನಷ್ಟು ತೂಕವಿದ್ದ ನಾಲ್ಕು ಬಂಡಲ್​ ಚಿನ್ನದ ಪೇಸ್ಟಅನ್ನು ತನ್ನ ಗುದದ್ವಾರದಲ್ಲಿ ಇಟ್ಟುಕೊಂಡು ತಂದ ವ್ಯಕ್ತಿಯನ್ನು ಚೆನ್ನೈ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ ಈ ರೀತಿಯಾಗಿ ತಂದ 40.35 ಲಕ್ಷ ರೂ. ಬೆಲೆ ಬಾಳುವ 810 ಗ್ರಾಂನಷ್ಟು 24 ಕ್ಯಾರೆಟ್​ ಚಿನ್ನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಕಸ್ಟಮ್ಸ್​ ನಿಯಮಗಳ ಪ್ರಕಾರ, ಭಾರತೀಯ ನಾಗರೀಕರು ವಿದೇಶಗಳಿಂದ ವಾಪಸಾಗುವಾಗ ಡ್ಯೂಟಿ ಫ್ರೀಯಾಗಿ ತರಬಹುದಾದ ಚಿನ್ನದ ಪ್ರಮಾಣದ ಮೇಲೆ ನಿರ್ಬಂಧವಿದೆ. ಪುರುಷರು 50,000 ರೂ.ಗಳಿಗಿಂತ ಹೆಚ್ಚು ಮೌಲ್ಯ ಹೊಂದಿರದ ಮತ್ತು 20 ಗ್ರಾಂಗಳವರೆಗಿನ ಚಿನ್ನದ ಆಭರಣಗಳನ್ನು ತರಬಹುದಾದರೆ, ಮಹಿಳೆಯರಿಗೆ 1 ಲಕ್ಷ ರೂ.ಗಳೊಳಗಿನ ಮೌಲ್ಯದ 40 ಗ್ರಾಂ ಚಿನ್ನದ ಆಭರಣ ತರುವ ಅವಕಾಶವಿರುತ್ತದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');